

ಮಾನ್ವಿ: ಶ್ರೀರಾಮ ಮಂದಿರ ಮಾದರಿ ಕಂಡು ಅಯೋಧ್ಯೆ ನೋಡಿದಷ್ಟು ಖುಷಿಯಾಯಿತು ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಗರೇಶ್ವರ ಆರ್ಯವೈಶ್ಯ ಸಂಘದಿಂದ ಬಿದರೆ ಗ್ರಾಮದ ವಿನಯರಾಮ ಅವರು ನಿರ್ಮಿಸಿರುವ ಅರಮನೆ ಶೈಲಿಯ ಅಯೋಧ್ಯೆ ಶ್ರೀರಾಮ ಮಂದಿರ ಮಾದರಿ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ 101 ಕಡೆ ಶ್ರೀರಾಮ ಮಂದಿರ ಮಾದರಿ ಪ್ರದರ್ಶನ ಮೂಲಕ ಸನಾತನ ಧರ್ಮ ಹಾಗೂ ಶ್ರೀರಾಮನ ಬಗ್ಗೆ ಜನರಿಗೆ ತಿಳಿಸಲು ವಿನಯರಾಮ ಮುಂದಾಗಿರುವುದು ಶ್ಲಾಘನೀಯ. ಈ ಮೂಲಕ ಅಯೋಧ್ಯೆ ಶ್ರೀರಾಮ ಮಂದಿರ ಹಾಗೂ ಬಾಲರಾಮನ ದರ್ಶನ ಮಾಡುವುದಕ್ಕೆ ಪ್ರೇರಣೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಶ್ರೀಗಳು ಹಾಗೂ ವಿನಯರಾಮ ಮಾತನಾಡಿದರು. ಕನ್ನಿಕಾ ಭಜನಾ ಮಂಡಳಿ ಹಾಗೂ ವಾಸವಾಂಬ ಭಜನಾ ಮಂಡಳಿ, ವಾಸವಿ ಪುರುಷರ ಭಜನಾ ಮಂಡಳಿ ತಂಡದಿಂದ ಭಜನೆ ಹಾಗೂ ಭಕ್ತಿಗೀತೆಗಳ ಗಾಯನ ಜರುಗಿತು. ನಗರೇಶ್ವರ ಆರ್ಯವೈಶ್ಯ ಸಂಘದ ತಾಲೂಕು ಅಧ್ಯಕ್ಷ ಆರ್.ಮುತ್ತುರಾಜ್ ಶೆಟ್ಟಿ, ಕಾರ್ಯದರ್ಶಿ ಬಿ.ಈರಣ್ಣ ಇತರರಿದ್ದರು.