

ಗೋಕರ್ಣ: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ನರಸಿಂಹ ಮಂದಿರದಲ್ಲಿ ಭಾನುವಾರ ನರಸಿಂಹ ಜಯಂತಿಯನ್ನು ವಿಧ್ಯುಕ್ತವಾಗಿ ಆಚರಿಸಲಾಯಿತು.
ಕೋಟಿತೀರ್ಥದ ಪುರಾಣ ಖ್ಯಾತ ಶ್ರೀ ನರಸಿಂಹ ದೇವರಿಗೆ ಬೆಳಗ್ಗೆಯಿಂದ ಅಪಾರ ಭಕ್ತರು ಭಕ್ತಿಯಿಂದ ಪೂಜೆ ಕೈಗೊಂಡರು.
ಮಂದಿರದ ಅರ್ಚಕರಾದ ವೇ. ಪರಮೇಶ್ವರ ರಾಮಕೃಷ್ಣ ಬೈಲಕೇರಿ ಮತ್ತು ಕುಟುಂಬದವರ ನೇತೃತ್ವದಲ್ಲಿ ವಿಶೇಷ ಪೂಜೆ ಮತ್ತು ಸೇವೆ ಆಯೋಜಿತವಾಯಿತು.
ಸಂಜೆ ಪುರಾತನ ಶ್ರೀ ನರಸಿಂಹ ವಿಗ್ರಹಕ್ಕೆ ಸರ್ವಾಲಂಕಾರ ಮಾಡಿ ಮಹಾಮಂಗಳಾರತಿ ನಡೆಯಿತು.