ಶ್ರೀ ಮಾರುತೇಶ್ವರ ಹುಂಡಿಯಲ್ಲಿ 1,68,900 ರೂ. ಸಂಗ್ರಹ

Untitled design
ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾದ ಶ್ರೀ ಮಾರುತೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಗಳನ್ನು ಎಣಿಕೆ ಮಾಡಲಾಯಿತು. ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಉಪತಹಸೀಲ್ದಾರ್ ವಿಜಯಕುಮಾರ ಗುಂಡೂರು, ದೇವಸ್ಥಾನ ಸಮಿತಿ ಕಾರ್ಯದರ್ಶಿ ಕೆ.ಚಂದಪ್ಪ, ಕಂದಾಯ ನಿರೀಕ್ಷಕ ಶರಣಪ್ಪ ಮುರ್ಲಾಪುರ, ಗ್ರಾಮ ಆಡಳಿತಾಧಿಕಾರಿ ನಾಗರಾಜ ಗೋಡಿನಾಳ ಇದ್ದರು.
Published on

ಯಲಬುರ್ಗಾ: ತಾಲೂಕಿನ ಚಿಕ್ಕವಂಕಲಕುಂಟಾದ ಶ್ರೀ ಮಾರುತೇಶ್ವರ ದೇವಸ್ಥಾನದ ಹುಂಡಿಯಲ್ಲಿ ಒಟ್ಟು 1,68900 ರೂ. ಸಂಗ್ರಹವಾಗಿದೆ.


ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಉಪತಹಸೀಲ್ದಾರ್ ವಿಜಯಕುಮಾರ ಗುಂಡೂರು ನೇತೃತ್ವದಲ್ಲಿ ಕಂದಾಯ ಇಲಾಖೆ, ದೇವಸ್ಥಾನ ಸಿಬ್ಬಂದಿ, ವ್ಯವಸ್ಥಾಪನಾ ಸಿಬ್ಬಂದಿ ಸಮ್ಮುಖದಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ಎಣಿಕೆ ಮಾಡಲಾಗಿದೆ. ಕಾಣಿಕೆ ಹಣವನ್ನು ಎಕ್ಸಿಸ್ ಬ್ಯಾಂಕ್‌ನ ದೇವಸ್ಥಾನದ ಖಾತೆಗೆ ಜಮೆ ಮಾಡಲಾಯಿತು.


ದೇವಸ್ಥಾನ ಸಮಿತಿ ಕಾರ್ಯದರ್ಶಿ ಕೆ.ಚಂದಪ್ಪ, ಕಂದಾಯ ನಿರೀಕ್ಷಕ ಶರಣಪ್ಪ ಮುರ್ಲಾಪುರ, ಗ್ರಾಮ ಆಡಳಿತಾಧಿಕಾರಿಗಳಾದ ನಾಗರಾಜ ಗೋಡಿನಾಳ, ಆರ್.ಎಂ.ಅಂಜು, ಗಾಳೆಪ್ಪ, ಸಿಬ್ಬಂದಿ ಬಸವರಾಜ ಕಮ್ಮಾರ, ಗ್ರಾಮ ಸಹಾಯಕರಾದ ರಸೂಲ್‌ಸಾಬ್, ಮಾಬುಸಾಬ್, ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ಶ್ರೀರಾಮ, ಸಿಬ್ಬಂದಿ ಹನುಮೇಶ ಗದ್ದಿ ಪ್ರಮುಖರಾದ ರಾಘವೇಂದ್ರ ಹಳ್ಳಿ, ಭೀಮಣ್ಣ ಕಂಬಳಿ, ಹನುಮಂತಪ್ಪ ಇಂಗಳದಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net