ಶ್ರೀ ಮಾರಮ್ಮ ದೇವಿ ಉತ್ಸವ, ಕೆಂಡೋತ್ಸವಕ್ಕೆ ಚಾಲನೆ

D.13-MDG-1P1 (1)
ಮೂಡಿಗೆರೆಯ ಹೆಸಗಲ್ ಗ್ರಾಮದಲ್ಲಿ ಶ್ರೀ ಮಾರಮ್ಮದೇವಿ ಉತ್ಸವದ ಅಂಗವಾಗಿ ಗ್ರಾಮದ ದೇವರನ್ನು ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು.
Published on

ಮೂಡಿಗೆರೆ: ತಾಲೂಕಿನ ಹೆಸಗಲ್ ಗ್ರಾಮದಲ್ಲಿ ಎರಡು ದಿನ ನಡೆಯುವ ಶ್ರೀ ಮಾರಮ್ಮದೇವಿ ಉತ್ಸವ ಹಾಗೂ ಕೆಂಡೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಹೆಸಗಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮೂರು ವರ್ಷಗಳಿಗೊಮ್ಮೆ ಕೆಂಡೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಸೋಮವಾರ ಗ್ರಾಮದೇವತೆ ಶ್ರೀ ಮಾರಮ್ಮದೇವಿ ಸನ್ನಿಧಿಗೆ ಸುತ್ತಮುತ್ತ ಗ್ರಾಮದಲ್ಲಿ ನೆಲೆಸಿರುವ ದುರ್ಗಿ, ಚೌಡಮ್ಮ, ಮಠದ ಭೂತಪ್ಪ, ರಾಹು ಭೂತಪ್ಪ ದೈವವನ್ನು ಹೊತ್ತು ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಶ್ರೀ ಮಾರಮ್ಮ ಸೇರಿದಂತೆ ಎಲ್ಲ ಗ್ರಾಮದ ದೇವರಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮಕ್ಕೆ ಉತ್ತಮ ಮಳೆ, ಬೆಳೆಯಾಗಿ ಸರ್ವರಿಗೂ ಒಳಿತಾಗಲು ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದರು. ಮಂಗಳವಾರ ಬಲಿ ಪೂಜೆ ಸೇರಿದಂತೆ ವಿಶೇಷ ಪೂಜಾ ಕಾರ್ಯ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಕೆಂಡೋತ್ಸವ, ಅನ್ನ ಸಂತರ್ಪಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net