ಶ್ರೀ ಮಲೆಮಹದೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ

IMG-20241112-WA0004
ಕಾರ್ತಿಕ ಸೋಮವಾರದ ಪ್ರಯುಕ್ತ ಕಪ್ಪಸೋಗೆ ಗ್ರಾಮದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಸೋಮವಾರ ರಾತ್ರಿ ಜರುಗಿತು.
Published on

ಕಪ್ಪಸೋಗೆ: ಹುಲ್ಲಹಳ್ಳಿ ಹೋಬಳಿಯ ಕಪ್ಪಸೋಗೆ ಗ್ರಾಮದಲ್ಲಿ ಕಾರ್ತಿಕ ಸೋಮವಾರದ ಪ್ರಯುಕ್ತ ಶ್ರೀ ಮಲೆಮಹದೇಶ್ವರ ಸ್ವಾಮಿ 18ನೇ ವರ್ಷದ ಪಲ್ಲಕ್ಕಿ ಉತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.

ಶ್ರೀ ಮಲೆಮಹದೇಶ್ವರ ಸ್ವಾಮಿಗೆ ಫಲ, ಪಂಚಾಮೃತ ಅಭಿಷೇಕ. ಅಭಿಷೇಕ. ಬಿಲ್ವಾರ್ಜನೆ. ಮಹಾ ಮಂಗಳಾರತಿ ಸೇರಿದಂತೆ ಪೂಜಾ ಕಾರ್ಯಕ್ರಮಗಳು ನಡೆದವು. ವಿವಿಧ ಹೂಗಳಿಂದ ಅಲಂಕೃತಗೊಂಡಿದ್ದ ಶ್ರೀ ಮಾದೇಶ್ವರ ಸ್ವಾಮಿ ಬಸವನ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಅಲಂಕೃತಗೊಳಿಸಲಾಯಿತು. ಮಹದೇಶ್ವರ ಸ್ವಾಮಿಯ ಹಾಗೂ ಬಸವನ ಉತ್ಸವದ ಪ್ರಯುಕ್ತ ನಂದಿಧ್ವಜ, ತಮಟೆ, ವೀರಗಾಸೆ ಪೂಜಾ ಕುಣಿತ, ಕಂಸಾಳೆ ಕುಣಿತ, ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಯಿತು.

ಹಸಿರು ತೋರಣಗಳು, ರಂಗೋಲಿ ಮತ್ತು ವಿದ್ಯುತ್ ದೀಪಗಳಿಂದ ಗ್ರಾಮದ ಬೀದಿಗಳನ್ನು ಸಿಂಗರಿಸಲಾಗಿತ್ತು. ಮಹದೇಶ್ವರ ಸ್ವಾಮಿ ಹಾಗೂ ಬಸವನ ಮೆರವಣಿಗೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮದ ಮುಖಂಡರು, ಯುವಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net