ಚೌಕಿ ಉತ್ಸವ ನಾಳೆ ಶೇಷೋತ್ಸವ

CTD 03 HD Pura-04
Published on

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಹೊರಕೆರೆದೇವರ ಪುರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಬ್ರಹ್ಮ ರಥೋತ್ಸವವೂ ಮಾ. 7ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಲಿದೆ.

ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಪಲ್ಲಕ್ಕಿ ಉತ್ಸವ ನೆರವೇರಿತು. 4ರಂದು ಬೆಳಗ್ಗೆ ಚೌಕಿ ಮತ್ತು ರಾತ್ರಿ ಹನುಮಂತೋತ್ಸವ ನಡೆಯಲಿದೆ. 5ರಂದು ಬೆಳಗ್ಗೆ ಶೇಷೋತ್ಸವ, ರಾತ್ರಿ ಮೊದಲ ಮೀಸಲು ಸಮರ್ಪಣೆಯಾಗಲಿದೆ.

6ರಂದು ಬೆಳಗ್ಗೆ ಗರುಡೋತ್ಸವ, ಪೀಠೋತ್ಸವಕ್ಕೆ ಸ್ವಾಮಿಯ ಆಗಮನ, ಮಧ್ಯಾಹ್ನ ಚೌಕಿ ಉತ್ಸವ, ಪುನಾ ರಾತ್ರಿ ಗರುಡೋತ್ಸವ, ಗಜೇಂದ್ರ ಮೋಕ್ಷ, ವೃಶ್ಚಿಕಾ ಲಗ್ನದ ಪುಷ್ಯರಾಂಶದಲ್ಲಿ ಕಲ್ಯಾಣೋತ್ಸವ ನಡೆಯಲಿದೆ.

7ರಂದು ಬೆಳಗ್ಗೆ ಆನೆ ಉತ್ಸವ, ರಥಾರೋಹಣ ಮಂಟಪಕ್ಕೆ ಸ್ವಾಮಿಯನ್ನು ಕರೆತರುವುದು, ಮಧ್ಯಾಹ್ನ 3.30ರಿಂದ 4.30ರ ವೃಶ್ಚಿಕಾ ಲಗ್ನ, ಪುಬ್ಬಾ ನಕ್ಷತ್ರದ ಸಮಯದಲ್ಲಿ ‘ಬ್ರಹ್ಮ ರಥೋತ್ಸವ’ ಜರುಗಲಿದೆ. ಅಂದು ಪಾನಕ ಪೂಜಾ ವಸಂತೋತ್ಸವ, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. 8ರಂದು ಭೂತ ಬಲಿಸೇವಾ, ಧೂಳೋತ್ಸವ, ರಜತ ಪೀಠೋತ್ಸವ, ಉಯ್ಯಲೋತ್ಸವ, ರಾತ್ರಿ ಅಶ್ವವಾಹನೋತ್ಸವ ಜರುಗಲಿದೆ.

9ರಂದು ಅವಭೃತ ಪಲ್ಲಕ್ಕಿ ಉತ್ಸವ, ಪೀಠೋತ್ಸವ, ಸಂತರ್ಪಣೆ, ನವಿಲೋತ್ಸವ, ಹೂವಿನ ಪಲ್ಲಕ್ಕಿ ಉತ್ಸವ, 10ರಂದು ಬೆಳಗ್ಗೆ ಸೂರ್ಯ ಮಂಡಲೋತ್ಸವ, ರಾತ್ರಿ ಶಯನೋತ್ಸವ ಸೇರಿ ಇತರೆ ಪೂಜಾ ಕೈಂಕರ್ಯಗಳು ನೆರವೇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net