

ಹುಬ್ಬಳ್ಳಿ : ಇಲ್ಲಿನ ವಿಶ್ವೇಶ್ವರ ನಗರದ ಪರಿವಾರ ಶ್ರೀ ಲಕ್ಷ್ಮೀನರಸಿಂಹ, ಮುಖ್ಯಪ್ರಾಣ ಹಾಗೂ ಶನಿದೇವರ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀನರಸಿಂಹ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
21ರಂದು ಬೆಳಗ್ಗೆ 6 ಗಂಟೆಗೆ ಸುಪ್ರಭಾತ, ಪಂಚಾಮೃತ, ಅಲಂಕಾರ ಹಾಗೂ ಭಜನೆ, 5 ಗಂಟೆಗೆ ಪಂ. ಸಮೀರ ಆಚಾರ್ಯ ಅವರಿಂದ ನರಸಿಂಹ ಪುರಾಣ, ತೊಟ್ಟಿಲೋತ್ಸವ, ನರಸಿಂಹ ಪ್ರಾದುರ್ಭಾವ ರೂಪಕ ನಡೆಯಲಿದೆ. 23ರಂದು ಬೆಳಗ್ಗೆ 10 ಗಂಟೆಗೆ ಇಸ್ಕಾನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಪರಿವಾರ ಶ್ರೀ ಲಕ್ಷ್ಮೀನರಸಿಂಹ ದೇವರ ರಥೋತ್ಸವ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ರಥೋತ್ಸವ, ಸಂಜೆ 6ಕ್ಕೆ ಪರಿವಾರ ಶ್ರೀ ಲಕ್ಷ್ಮೀನರಸಿಂಹದೇವರ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ.