ಗೀತಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

lord krishna
Published on

ಹುಬ್ಬಳ್ಳಿ: ನಗರದ ಕೇಶ್ವಾಪುರ ದೇಸಾಯಿ ಪಾರ್ಕ್​ನ ಗೀತಾ ಮಂದಿರದಲ್ಲಿ ಸೆ. 6ರಿಂದ 8ರವರೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.

ಸೆ. 6ರಂದು ಬೆಳಗ್ಗೆ 7 ಗಂಟೆಗೆ ಬೆಣ್ಣೆ ಅಲಂಕಾರ, ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಭಜನೆ, ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 6.30 ಗಂಟೆಗೆ ಪಂ. ಪ್ರದ್ಯುಮ್ನಾಚಾರ್ಯ ಜೋಶಿ ಅವರಿಂದ ಪ್ರವಚನ, ರಾತ್ರಿ 8 ಗಂಟೆಗೆ ರಾಮಚಂದ್ರಾಚಾರ್ಯ ಅವರಿಂದ ದಾಸವಾಣಿ ಕಾರ್ಯಕ್ರಮ, ರಾತ್ರಿ 11ಕ್ಕೆ ತೊಟ್ಟಿಲೋತ್ಸವ ನಡೆಯಲಿದೆ.

7ರಂದು ಬೆಳಗ್ಗೆ 8.30 ಗಂಟೆಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಸಂಜೆ 4 ಗಂಟೆಯಿಂದ ಭಜನೆ, ಪ್ರವಚನ, ಅಷ್ಟಾವಧಾನ ಸೇವೆ, 8ರಂದು ಬೆಳಗ್ಗೆ 8.30ಕ್ಕೆ ಪಂಚಾಮೃತ ಅಭಿಷೇಕ, 11 ಗಂಟೆಗೆ ರಥೋತ್ಸವ, ಮಧ್ಯಾಹ್ನ 12ಕ್ಕೆ ಗೋ ಪೂಜೆ ಜರುಗಲಿದೆ ಎಂದು ಟ್ರಸ್ಟಿ ಕೇಶವ ದೇಸಾಯಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net