ಮೈಸೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

shri krishna janmashtami
Published on

ಮೈಸೂರು: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿಶ್ವೇಶ್ವರ ನಗರದ ಮಹರ್ಷಿ ವಿದ್ಯಾಸಂಸ್ಥೆಯಲ್ಲಿ 6 ವರ್ಷದ ಒಳಗಿನ ಮಕ್ಕಳಿಗೆ ಶುಕ್ರವಾರ ರಾಧಾ-ಕೃಷ್ಣ ವೇಷ ಭೂಷಣ ಸ್ಪರ್ಧೆ ನಡೆಯಿತು.

ಸ್ಪರ್ಧೆಯಲ್ಲಿ ಹೆಬ್ಬಾಳ ನಿವಾಸಿ ಪ್ರದೀಪ್ ಬಾಬು-ರಂಜಿತಾ ದಂಪತಿ ಪುತ್ರ ಜೀವಿತ್ ಪ್ರಥಮ, ಪಡುವಾರಹಳ್ಳಿ ನಿವಾಸಿ ವಿನೋದ್‌ರಾಜ್-ಲಾವಣ್ಯ ಪುತ್ರ ಶೌರ್ಯ ವಿ. ರಾಜ್ ದ್ವಿತೀಯ, ಕನಕಗಿರಿ ನಿವಾಸಿ ಶಿವು ಪುತ್ರಿ ಎಸ್. ದಿಶಾ ತೃತೀಯ ಬಹುಮಾನ ಪಡೆದರು.

ಕಾಂಗ್ರೆಸ್ ಮುಖಂಡ ರಾಜಾರಾಂ ಮಾತನಾಡಿ, ಯಾವುದೇ ಜಾತಿ ಭೇದವಿಲ್ಲದೇ ಜಗತ್ತಿನಾದ್ಯಂತ ಶ್ರೀಕೃಷ್ಣನನ್ನು ಆರಾಧಿಸಲಾಗುತ್ತಿದೆ. ಕೃಷ್ಣನ ತತ್ವ, ವಿಚಾರಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಕೃಷ್ಣನ ಜೀವನದ ಕತೆಗಳು ನಮ್ಮ ಜೀವನಕ್ಕೆ ಪ್ರೇರಣೆಯಾಗಬೇಕು ಎಂದು ಕರೆ ನೀಡಿದರು.

ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಸುಜೀವ್ ಫೌಂಡೇಷನ್ ಅಧ್ಯಕ್ಷ ರಾಜಾರಾಮ್, ಉದ್ಯಮಿ ಪುರಾಣಿಕ್, ವಿಪ್ರ ಮುಖಂಡ ಕೃಷ್ಣದಾಸ್ ಪುರಾಣಿಕ್, ಮಹರ್ಷಿ ವಿದ್ಯಾಸಂಸ್ಥೆಯ ತೇಜಸ್ ಶಂಕರ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net