ಶ್ರೀಗಳಿಂದ ನವರಾತ್ರಿ ಉತ್ಸವಕ್ಕೆ ಚಾಲನೆ

mantralaya
mantralaya
Published on

ರಾಯಚೂರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸೋಮವಾರ ಘಟಸ್ಥಾಪನಾ ಪೂಜೆ ಮಾಡುವುದರ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು.

ನಂತರ ಶ್ರೀಮಠದಲ್ಲಿ ಎಸ್‌ಜಿಎಸ್ ವಿದ್ಯಾಪೀಠದ ಪಂಡಿತರು,ವಿದ್ಯಾರ್ಥಿಗಳು ವೇದ ಮಂತ್ರಗಳು ಮತ್ತು ದುರ್ಗಾ ಸೂಕ್ತವನ್ನು ಪಠಿಸುತ್ತಾ ವಾತಾವರಣವನ್ನು ದೈವಿಕ ಕಂಪನಗಳಿಂದ ತುಂಬಿದರು. ನಂತರ ಶ್ರೀಗಳು ಮಂಚಲಮ್ಮ ಸನ್ನಿಧಾನಕ್ಕೆ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀಮಠದ ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net