ಅತ್ಯಲ್ಪ ಅವಧಿಯಲ್ಲಿ ಅದ್ವಿತೀಯ ಸಾಧನೆ : ಶ್ರೀ ಗುರುದೇವ ಸಹಕಾರಿ ಸಭೆಯಲ್ಲಿ ಭಗೀರಥ ಜಿ. ಅಭಿಪ್ರಾಯ

07
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 2024-25ನೇ ಸಾಲಿನ 18ನೇ ಮಹಾಸಭೆ ಶನಿವಾರ ನಡೆಯಿತು.

ಅಧ್ಯಕ್ಷ ಭಗೀರಥ ಜಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಹಕಾರ ಸಂಘ ನಿಮ್ಮ ಸ್ಫೂರ್ತಿ ನಮ್ಮ ಉತ್ಕೃಷ್ಟ ಸೇವೆ ಎನ್ನುವ ಧೈಯವಾಕ್ಯದೊಂದಿಗೆ ಸದಸ್ಯರ ಸಹಕಾರದಿಂದ ಸಹಕಾರ ಕ್ಷೇತ್ರದಲ್ಲಿ 16 ವರ್ಷಗಳ ಅತ್ಯಲ್ಪ ಅವಧಿಯಲ್ಲಿ ಅದ್ವಿತೀಯ ಸಾಧನೆ ಮಾಡಿದೆ ಎಂದರು.

1,500 ಕೋಟಿ ರೂ. ವಾರ್ಷಿಕವಾಗಿ ವ್ಯವಹಾರ ನಡೆಸಿ, 225 ಕೋಟಿ ರೂ. ಮಿಕ್ಕಿ ಸಾಲ ಹಂಚಿಕೆ ಮಾಡಿ, 267 ಕೋಟಿ ರೂ. ಠೇವಣಿ, 4.80 ಕೊಟಿ ರೂ. ಲಾಭ ಗಳಿಸಿರುವ ಸಂಸ್ಥೆಯು, ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಯಿತು.

ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿ, ಲೋಕಾಯುಕ್ತ ಇನ್‌ಸ್ಪೆಕ್ಟರ್ ಪ್ರದೀಪ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ವ್ಯವಹಾರ ಗಳಿಸಿದ ಬೆಳ್ತಂಗಡಿ ಶಾಖೆ, ಅತಿ ಹೆಚ್ಚು ಠೇವಣಿ ಸಂಗ್ರಹಿದ ಪಡೀಲು ಶಾಖೆ, ಅತಿ ಹೆಚ್ಚು ಸಾಲ ನೀಡಿದ ಪುರಸರಕಟ್ಟೆ ಶಾಖೆ, ಶೇ.100ರಷ್ಟು ಸಾಲ ವಸೂಲಾತಿಯ ಕಬಕ ಶಾಖೆ, ಲೆಕ್ಕಪರಿಶೋಧನೆಯಲ್ಲಿ ಎ ಗ್ರೇಡ್ ಪಡೆದ ಹಳೆಯಂಗಡಿ ಶಾಖೆ, ನೂತನ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಉಪ್ಪಿನಂಗಡಿ ಶಾಖೆ, ಅತಿ ಕಡಿಮೆ ಖರ್ಚು ಮಾಡಿ ಅಭಿವೃದ್ಧಿ ಗಳಿಸಿದ ಕಲ್ಲಡ್ಕ ಶಾಖೆ, ಕ್ಷಿಪ್ರ ಅಭಿವೃದ್ಧಿ ಕುಂಬ್ರ ಶಾಖೆ, ಅತಿ ಹೆಚ್ಚು ದೈಹಿಕ ಠೇವಣಿ ಸಂಗ್ರಹಿಸಿದ ಶಿರ್ತಾಡಿ ಶಾಖೆಯ ಶಶಿಧರ್, ಮುಡಿಪು ಶಾಖೆಯ ನಾರಾಯಣ ಭಟ್ ಮತ್ತು ಸಿಬ್ಬಂದಿಯ ಸೇವೆಯನ್ನು ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಜಗದೀಶ್ ಚಂದ್ರ ಡಿ.ಕೆ., ನಿರ್ದೇಶಕರಾದ ಸುಜೀತಾ ವಿ.ಬಂಗೇರ, ತನುಜಾ ಶೇಖರ್, ಚಂದ್ರಶೇಖರ್, ಸಂಜೀವ ಪೂಜಾರಿ, ಕೆ.ಪಿ.ದಿವಾಕರ, ಧರಣೇಂದ್ರ ಕುಮಾರ್, ಜಯವಿಕ್ರಮ್ ಪಿ., ಆನಂದ ಪೂಜಾರಿ, ರಕ್ಷಿತ್ ಶಿವರಾಮ್, ಚಿದಾನಂದ ಪೂಜಾರಿ, ಸೂರಜ್ ಕುಮಾರ್, ವಿಶೇಷಾಧಿಕಾರಿ ಮೋನಪ್ಪ ಪೂಜಾರಿ, ಸಿಇಒ ಅಶ್ವಥ್ ಕುಮಾರ್ ಉಪಸ್ಥಿತರಿದ್ದರು. ಗಂಗಾಧರ ಮಿತ್ತಮಾರ್ ಸ್ವಾಗತಿಸಿದರು. ಡಾ.ರಾಜಾರಾಮ ಕೆ.ಬಿ. ವಂದಿಸಿದರು. ಪ್ರದೀಶ್ ಎನ್., ಪ್ರವೀಣ್ ಪೂಜಾರಿ ನಿರೂಪಿಸಿದರು.

ಸಂಸ್ಥೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದೆ. ನಿರ್ದೇಶಕರ ಸಹಕಾರ, ವಿಶೇಷ ಅಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಸಂಸ್ಥೆ ಬೆಳೆದಿದೆ. ಉನ್ನತ ಡಿವಿಡೆಂಡ್ ನೀಡುವ ಕುರಿತು ಮುಂಬರುವ ದಿನಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಭಗೀರಥ ಜಿ., ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net