ಸೋಮವಾರಪೇಟೆಯಲ್ಲಿ ಶ್ರೀ ಗುರು ಪೂರ್ಣಿಮೆ

21SPT2
ಸೋಮವಾರಪೇಟೆ ಶ್ರೀ ರಾಮ ಮಂದಿರದಲ್ಲಿ ಆಫ್ ಲಿವಿಂಗ್ ಸಂಸ್ಥೆಯಿಂದ ಶ್ರೀ ಗುರು ಪೂರ್ಣಿಮ ಉತ್ಸವ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸತ್ಸಂಗ ಕಾರ್ಯಕ್ರಮ ಜರುಗಿತು.
Published on

ಸೋಮವಾರಪೇಟೆ: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಪಟ್ಟಣದ ರಾಮಮಂದಿರದಲ್ಲಿ ಶ್ರೀ ಗುರು ಪೂರ್ಣಿಮೆ ಉತ್ಸವ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸತ್ಸಂಗ ಕಾರ್ಯಕ್ರಮ ಭಾನುವಾರ ಜರುಗಿತು.

ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಹಿರಿಯ ಶಿಕ್ಷಕ ಮಹದೇವ ಪ್ರಸಾದ್ ಮಾತನಾಡಿ, ಶಿಕ್ಷಕರು ಮತ್ತು ಮಾರ್ಗದರ್ಶಕರಿಗೆ ಗೌರವ ಸಮರ್ಪಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಗುರು ಮತ್ತು ಅವರ ಶಿಷ್ಯರ ನಡುವಿನ ಪವಿತ್ರ ಬಂಧವನ್ನು ಗೌರವಿಸಲಾಗುತ್ತದೆ. ಇದು ನಮ್ಮ ಜೀವನದಲ್ಲಿ ಜ್ಞಾನ, ಬುದ್ಧಿವಂತಿಕೆ ಮತ್ತು ಮಾರ್ಗದರ್ಶನದ ಮಹತ್ವನ್ನು ನೆನೆಪಿಸುತ್ತದೆ ಎಂದರು.

ಜೀವನದಲ್ಲಿ ಆಧ್ಯಾತ್ಮ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಗುರು- ಹಿರಿಯರನನು ಗೌರವಿಸುವುದನ್ನು ಪಾಲಕರು ಹೇಳಿಕೊಡಬೇಕು. ಆರ್ಟ್ ಆಫ್ ಲಿವಿಂಗ್ ವತಿಯಿಂದ ನಡೆಯುವ ಯುವ ನಾಯಕತ್ವ ಶಿಬಿರಗಳಗೆ ಮಕ್ಕಳನ್ನು ಕಳುಹಿಸಿದಲ್ಲಿ, ಅವರಲ್ಲಿ ನಾಯಕತ್ವ ಗುಣಗಳು ಬೆಳೆಯಲು ಸಹಕಾರಿಯಾಗಲಿದೆ ಎಂದರು.

ಮೋಹನ್‌ಕುಮಾರ್ ಶಾಸ್ತ್ರಿ, ಶ್ರೀ ಸತ್ಯನಾರಾಯಣ ಪೂಜೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಹಿರಿಯ ಶಿಕ್ಷಕರಾದ ಶ್ವೇತಾ ಲಮಣಿ, ಚನ್ನವೀರಪ್ಪ, ವಾಣಿಶ್ರೀ ಮತ್ತು ಸ್ಥಳೀಯ ಸಂಸ್ಥೆಯ ಶಿಕ್ಷಕಿ ರಾಗಿಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net