ಶ್ರೀ ಗುರುಬಸವೇಶ್ವರ ಮೆರವಣಿಗೆ ಅದ್ದೂರಿ

09ALD01
ಕವಲೂರಿನಲ್ಲಿ ಗುರುಬಸವೇಶ್ವರ ಭಜನಾ ಮುಕ್ತಾಯದ ಅಂಗವಾಗಿ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಿತು. ಪ್ರಮುಖರಾದ ಮುತ್ತಯ್ಯ, ನಾಗರಾಜ, ಹನುಮಂತ, ಶಿವಪ್ಪ, ನಾಗಪ್ಪ, ಶರಣಪ್ಪ, ವೀರಣ್ಣ, ಮಲ್ಲಪ್ಪ ಇತರರಿದ್ದರು.
Published on

ಅಳವಂಡಿ: ಸಮೀಪದ ಕವಲೂರು ಗ್ರಾಮದಲ್ಲಿ ಶ್ರೀ ಗುರುಬಸವೇಶ್ವರ ಭಜನಾ ಮಂಗಲ ಮೆರವಣಿಗೆ ಸೋಮವಾರ ಅದ್ದೂರಿಯಿಂದ ಜರುಗಿತು.

ಮಂಗಲದ ಅಂಗವಾಗಿ ದೇವಸ್ಥಾನವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅಡ್ಡಪಲ್ಲಕ್ಕಿಯಲ್ಲಿ ಶ್ರೀ ಗುರುಬಸವೇಶ್ವರ ಮೂರ್ತಿ ಮೆರವಣಿಗೆ ನಡೆಯಿತು. ಕಳಸ, ವಾದ್ಯ ಮೇಳದೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಜರುಗಿತು.

ಪ್ರಮುಖರಾದ ಮುತ್ತಣ್ಣ ಬಿಸರಳ್ಳಿ, ನಾಗರಾಜ ಕಗ್ಗಲ್, ನಾಗಪ್ಪ ತುರ್ಕಾಣಿ, ಶರಣಪ್ಪ ಬೀಳಗಿ, ಅಜಯ ಕುರವತ್ತಿ, ವೀರಣ್ಣ ಕುರವತ್ತಿ, ಶರಣಪ್ಪ ಕಮತರ, ಮಲ್ಲಪ್ಪ ಕೊಂತಿಕಲ್, ವೀರಪ್ಪ, ಹನುಮಂತ ಹೊಸಮನಿ, ಹನುಮಂತ, ಮಲ್ಲಪ್ಪ, ಬಸವರಾಜ, ಸುರೇಶ ಸಿಂದೋಗಿ, ಹನುಮಪ್ಪ, ಅಶೋಕ, ಗವಿಸಿದ್ದಪ್ಪ, ನಿಂಗಪ್ಪ, ಪ್ರಭು, ಸುರೇಶ, ಶಿವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net