

ಹುಬ್ಬಳ್ಳಿ: ದೇಶಪಾಂಡೆನಗರ ಕೆಜಿಎ ಮೈದಾನದಲ್ಲಿ ಭಾನುವಾರ ಆರಂಭಗೊಂಡ ಶ್ರೀ ದುರ್ಗಾ ಕಪ್-16 ವಯೋಮಿತಿಯ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಎ ಹಾಗೂ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ (ಟಿಎಸ್ಸಿಎ) ತಂಡಗಳು ಶುಭಾರಂಭ ಮಾಡಿದವು.
ಮೊದಲ ಪಂದ್ಯದಲ್ಲಿ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಎ , ಚಾಂಪಿಯನ್ಸ್ ನೆಟ್ ತಂಡದ ವಿರುದ್ಧ 7 ವಿಕೆಟ್ಗಳಿಂದ ಜಯಿಸಿದರೆ, 2ನೇ ಪಂದ್ಯದಲ್ಲಿ ಟಿಎಸ್ಸಿಎ, ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಬಿ ತಂಡದ ವಿರುದ್ಧ 9 ವಿಕೆಟ್ಗಳಿಂದ ಗೆಲುವು ದಾಖಲಿಸಿತು.
ಚಾಂಪಿಯನ್ಸ್ ನೆಟ್ ತಂಡ ನಿಗದಿತ 25 ಓವರ್ಗಳಲ್ಲಿ 8 ವಿಕೆಟ್ಗೆ 116 ರನ್ಗಳಿಸಿತ್ತು. ಸಮರ್ಥ ಪಾಟೀಲ 20ರನ್ ಹಾಗೂ ಮುಸ್ತಫಿಜ್ ಜೆ. 19 ರನ್ ಗಳಿಸಿದರು. ಪವನ ಎಸ್. (34ಅ), ಈರಪ್ಪ ಘಂಟಿ (27) ಹಾಗೂ ಸಚಿನ ಭಟ್ (25) ಉತ್ತಮ ಬ್ಯಾಟಿಂಗ್ ನೆರವಿನಿಂದ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡಮಿ (ಎ) ತಂಡ 15.3 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 118ರನ್ ಕಲೆ ಹಾಕಿ ಜಯ ತನ್ನದಾಗಿಸಿಕೊಂಡಿತು.
ತೇಜಸ್ ಹಳೆಉಪ್ಪಾರ್ (11ರನ್ಗೆ 5 ವಿಕೆಟ್) ಮಾರಕ ಬೌಲಿಂಗ್ ನೆರವಿನಿಂದಾಗಿ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ತಂಡ ಕೇವಲ 7.5 ಓವರ್ಗಳಲ್ಲಿ 65 ರನ್ಗಳನ್ನು ಕಲೆ ಹಾಕಿ ಗೆಲುವಿನ ನಗೆ ಬೀರಿತು.
ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡಮಿ (ಬಿ) ತಂಡ 19.5 ಓವರ್ಗಳಲ್ಲಿ 63 ರನ್ ಮೊತ್ತಕ್ಕೆ ಆಲೌಟ್ ಆಗಿತ್ತು. ಸಂಕೇತ ರಾಥೋಡ್ 20 ರನ್ ಗಳಿಸಿದ್ದರು. ಟಿಎಸ್ಸಿಎ ತಂಡದ ಶ್ರೀನಾಥ ರಾಜೋಳಿ 16 ಎಸೆತಗಳಲ್ಲಿ 7 ಬೌಂಡರಿಗಳ ಮೂಲಕ 34 ರನ್ ಹಾಗೂ ಎ.ಆರ್. ಸಮೀತ 18 ರನ್ ಬಾರಿಸಿದರು.
ಅ. 16ರಂದು ಬೆಳಗ್ಗೆ 8.30ಕ್ಕೆ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್-ಬೆಳಗಾವಿಯ ಆನಂದ ಕ್ರಿಕೆಟ್ ಅಕಾಡೆಮಿ ಹಾಗೂ ಮಧ್ಯಾಹ್ನ 1 ಗಂಟೆಗೆ ಶ್ರೀ ದುರ್ಗಾ ವುಮೆನ್ಸ್ ಕಂಬೈನ್ಡ್ ಇಲೆವನ್-ಬೆಳಗಾವಿಯ ಯೂನಿಯನ್ ಜಿಮ್ಾನಾ ಸೆಣಸಲಿವೆ.