ಶ್ರೀ ದುರ್ಗಾ ಡೆವಲಪರ್ಸ್​ನಿಂದ ಕ್ಯಾಲೆಂಡರ್ ಬಿಡುಗಡೆ

shri durga calender
Published on

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿಯೇ ವಸತಿ ನಿವೇಶನ ಹಾಗೂ ಅಪಾರ್ಟಮೆಂಟ್ ನಿರ್ವಣದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್, ಹೊಸ ವರ್ಷಾಚರಣೆ ಅಂಗವಾಗಿ ಹೊರ ತಂದಿರುವ 2024ರ ಬಹು ಉಪಯೋಗಿ ಕ್ಯಾಲೆಂಡರ್ ಅನ್ನು ಶಾಸಕ ಪ್ರಸಾದ ಅಬ್ಬಯ್ಯ ಬಿಡುಗಡೆಗೊಳಿಸಿದರು.

ಶಿರೂರ ಪಾರ್ಕ್​ನಲ್ಲಿರುವ ಕಂಪನಿಯ ಕಚೇರಿಯಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಅಬ್ಬಯ್ಯ, ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಹೊರ ತಂದಿರುವ ಕ್ಯಾಲೆಂಡರ್ ಅತ್ಯಂತ ಉಪಯುಕ್ತವಾಗಿದ್ದು ಗ್ರಾಹಕರಿಗೆ, ಸಾರ್ವಜನಿಕರಿಗೆ ನಿತ್ಯದ ಪಂಚಾಂಗ ತಿಳಿಯಲು ತುಂಬಾ ಅನುಕೂಲಕರವಾಗಿದೆ ಎಂದರು.

ಕಂಪನಿಯು ಮಾಜದ ಎಲ್ಲ ವರ್ಗದ ಜನರು ಸ್ವಂತ ಸೂರು ಹೊಂದಬೇಕೆಂಬ ಉದಾತ್ತ ಧ್ಯೇಯದೊಂದಿಗೆ ಮುನ್ನುಗ್ಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಭವಿಷ್ಯದಲ್ಲಿ ಸಂಸ್ಥೆ ತನ್ನ ಕಾರ್ಯ ವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸಿಕೊಳ್ಳುವ ಮೂಲಕ ಸಮಾಜ ಕಟ್ಟ ಕಡೆಯ ವ್ಯಕ್ತಿಯೂ ಸೂರು ಹೊಂದುವಂತಾಗಲಿ ಎಂದರು.

ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿರೇಶ ಉಂಡಿ, ಕಾಂಗ್ರೆಸ್ ಯುವ ನಾಯಕ ರಜತ ಉಳ್ಳಾಗಡ್ಡಿಮಠ, ಶಾಸಕರಿಗೆ ಸನ್ಮಾನಿಸಿದರು.

ಸಂಸ್ಥೆಯ ಎಚ್. ಆರ್. ಮ್ಯಾನೇಜರ್ ಸದ್ದಾಂ ಮುಲ್ಲಾ, ಶೋಭಾ ಕಡತಾಳ, ಅಶ್ವಿನಿ ಚಂದ್ರಾಪಟ್ಟಣ, ಸೇಲ್ಸ್ ಮ್ಯಾನೇಜರಗಳಾದ ಮಂಜುನಾಥ ಯಡ್ರಾವಿ, ರವಿಕಿರಣ ಗ್ರಾಮಪುರೋಹಿತ, ಈರಣ್ಣ ಸೇರಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net