

ಹುಬ್ಬಳ್ಳಿ: ನಗರದ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ, ಶ್ರೀ ದುರ್ಗಾ ಡೆವಲಪರ್ಸ್ ಆಂಡ್ ಪ್ರಮೋಟರ್ಸ್ ಹಾಗೂ ರಜತ್ ಉಳ್ಳಾಗಡ್ಡಿಮಠ ಫೌಂಡೇಷನ್ ವತಿಯಿಂದ ಅ. 15ರಿಂದ 22ರವರೆಗೆ ದೇಶಪಾಂಡೆನಗರದ ಕೆಜಿಎ ಮೈದಾನದಲ್ಲಿ ಶ್ರೀ ದುರ್ಗಾ ಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ.
ಟೂರ್ನಿಯಲ್ಲಿ 16 ವಯೋಮಿತಿಯ 12 ತಂಡಗಳು ಸೆಣಸಲಿವೆ. ಇದರಲ್ಲಿ 1 ಬಾಲಕಿಯರ ತಂಡ (ದುರ್ಗಾ ವುಮೆನ್ಸ್ ಕಂಬೈನ್ಡ್ ಇಲೆವನ್) ಇರುವುದು ವಿಶೇಷವಾಗಿದೆ. ತಲಾ 25 ಓವರ್ಗಳ ಪಂದ್ಯ ಇದಾಗಿದ್ದು, ನಿತ್ಯ 2 ಪಂದ್ಯಗಳು ನಡೆಯಲಿವೆ. ಹುಬ್ಬಳ್ಳಿ, ಹೊಸಪೇಟೆ, ಬೆಳಗಾವಿ, ಚಿಕ್ಕೋಡಿ, ವಿಜಯಪುರ ಜಿಲ್ಲೆಗಳ ತಂಡಗಳು ಪಾಲ್ಗೊಂಡಿವೆ.
ಅ. 15ರಂದು ಬೆಳಗ್ಗೆ 9 ಗಂಟೆಗೆ ಶಾಸಕ ಪ್ರಸಾದ ಅಬ್ಬಯ್ಯ ಉದ್ಘಾಟಿಸುವರು. ಡಿಸಿಪಿ ರಾಜೀವ ಎಂ., ಮಾಜಿ ಮೇಯರ್ ವೀರಣ್ಣ ಸವಡಿ, ರಜತ್ ಉಳ್ಳಾಗಡ್ಡಿಮಠ ಫೌಂಡೇಷನ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಪಾಲ್ಗೊಳ್ಳಲಿದ್ದಾರೆ. ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ವೀರೇಶ ಉಂಡಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಜೇತ ತಂಡಗಳಿಗೆ ಹಾಗೂ ವಿಶೇಷ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.