

ಗದಗ: ಬೆಟಗೇರಿ ಹಳೇಬನಶಂಕರಿ ದೇವಸ್ಥಾನಲ್ಲಿ ಬುಧವಾರ ದೇವಲ ಮಹಷಿರ್ ಜಯಂತಿ ಜರುಗಿತು. ಬೆಳಗ್ಗೆ 7 ಗಂಟೆಗೆ ಹಳೇಬನಶಂಕರಿದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಜರುಗಿತು.
ಶ್ರೀ ದೇವಲ ಮಹಷಿರ್ಯ ಭಾವಚಿತ್ರ ಮೆರವಣಿಗೆಯು ಹಳೇಬನಶಂಕರಿದೇವಿ ದೇವಸ್ಥಾನದಿಂದ ಹೊರಟು ತೆಗ್ಗಿನಪೇಟೆ, ಕುರಟ್ಟಿಪೇಟೆ, ಗಾಗಿರ್ಪೇಟೆ, ಚನ್ನಗೌಡ್ರ ಓಣಿಗಳ ಮುಖಾಂತರ ಪಾಲಾ ಬದಾಮಿ ರಸ್ತೆ ಮೂಲಕ ಜರುಗಿ ಹೊಸ ಬನಶಂಕರಿ ದೇವಿ ದೇವಸ್ಥಾನ ತಲುಪಿತು. ಹೊಸ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಹಾಗೂ ಮಂಗಳಾರತಿ ಜರುಗಿತು. ರಾವೇಂದ್ರ ಕೊಪ್ಪಳ ಅವರಿಂದ ದೇವಾಂಗ ಪುರಾಣ ಮಂಗಳಗೊಂಡಿತು. ಮಹಾಮಂಗಳಾರತಿ, ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಅನ್ನಸಂತರ್ಪಣೆ ಜರುಗಿತು.
ಕಾರ್ಯಕ್ರಮದಲ್ಲಿ ಹಿರಿಯರು, ಯುವಕರು, ಸಂ ಸಂಸ್ಥೆಗಳ ಸದಸ್ಯರು, ಮಹಿಳೆಯರು ಇದ್ದರು.