

ಬಣಕಲ್: ತರುವೆ ಶ್ರೀ ಚೌಡೇಶ್ವರಿ ಅಮ್ಮನವರ ಕಲಾವಳಿ ಉತ್ಸವ ಗುರುವಾರ ರಾತ್ರಿ ಆದಿಸ್ಥಾನ ತರಿಮಲೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಗುರುವಾರ ಸಂಜೆ 4 ಗಂಟೆಗೆ ಪೂಜಾ ವಿಧಿವಿಧಾನಗಳು ಪ್ರಾರಂಭವಾಯಿತು. ರಾತ್ರಿ 8 ಗಂಟೆಗೆ 101 ದೈವಗಳಿಗೆ ದೀಪಾರಾಧನೆ, ನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಿತು. ದಟ್ಟ ಕಾನನದ ನಡುವಿನ ದೈವಸ್ಥಾನದಲ್ಲಿ ನಡೆದ ಕಲಾವಳಿ ಉತ್ಸವಕ್ಕೆ ತರುವೆ, ಕೊಟ್ಟಿಗೆಹಾರ, ಅತ್ತಿಗೆರೆ, ಮೂಡಿಗೆರೆ, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ದೇವರಿಗೆ ಹಣ್ಣುಕಾಯಿ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ತರುವೆ ಗ್ರಾಮಸ್ಥರು ಇದ್ದರು.