ಶ್ರೀ ಚೌಡೇಶ್ವರಿ ದೇವಿ ಮಹಾಚಂಡಿಕಾ ಹೋಮ ಸಂಪನ್ನ

26 BIRUR 01
ಬೀರೂರಿನ ಅಶೋಕನಗರ ಬಡಾವಣೆಯ ಶ್ರೀ ಚೊಕ್ಕಾಪುರದ ಚೌಡೇಶ್ವರಿ ಅಮ್ಮನವರ ಮಹಾ ಚಂಡಿಕಾ ಹೋಮ ಶುಕ್ರವಾರ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಂಪನ್ನಗೊಂಡಿತು.
Published on

ಬೀರೂರು: ಬೀರೂರಿನ ಅಶೋಕನಗರದ ಶ್ರೀ ಚೊಕ್ಕಾಪುರದ ಚೌಡೇಶ್ವರಿ ದೇವಿಯ ಮಹಾ ಚಂಡಿಕಾ ಹೋಮ ಶುಕ್ರವಾರ ಸಂಪನ್ನಗೊಂಡಿತು.
ಬುಧವಾರದಿಂದ ಆರಂಭವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಗಣಪತಿ ಪೂಜೆ, ಸ್ವಸ್ತಿವಾಚನ, ಶುದ್ಧಪುಣ್ಯಾಹ, ಸಂಜೆ ಶುದ್ಧ ಪುಣ್ಯಾಹ, ಸ್ವಸ್ತಿವಾಚನ, ಅಂಕುರಾರ್ಪಣ, ದ್ವಜಾರೋಹಣ, ನವಗ್ರಹ, ಗಣಪತಿ ದುರ್ಗಾ, ಮತ್ಯುಂಜಯ ಪರಿವಾರ ದೇವತೆಗಳ ಕಳಶಸ್ಥಾಪನೆ, ಪ್ರಧಾನ ಕಳಶಸ್ಥಾಪನೆ, ವಾಸ್ತುಪೂಜೆ, ವಾಸ್ತುಹೋಮ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಸಲಾಯಿತು.
ಗುರುವಾರ ಬೆಳಗ್ಗೆ ಸ್ವಸ್ತಿವಾಚನ, ಯಾಗಶಾಲಾ ಪ್ರವೇಶ, ಪರ‌್ಯಗ್ನೀಕರಣ, ಅಗ್ನಿ ಪ್ರತಿಷ್ಠ, ಕಲಶಾರಾಧನೆ, ಮಹಾಗಣಪತಿ, ನವಗ್ರಹ, ದುರ್ಗಾ, ಮೃತ್ಯುಂಜಯ ಪೂರ್ವಕ ಪಂಚಸೂಕ್ತ ಹೋಮಗಳು, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ ದೇವಿಯ ಮೂಲಮೂರ್ತಿ ಮಹಾಅಭಿಷೇಕ, ವಿಶೇಷ ಅಲಂಕಾರ, ಕಲಶಾರಾಧನೆ, ಉಕ್ತ ಹೋಮಗಳು, ಅಧಿದೇವತಾ ಹೋಮಗಳು, ಕಳಾನ್ಯಾಸ ಪೂರ್ವಕ ಕಳಾವೃದ್ಧಿಹೋಮ, ಮಹಾಮಂಗಳಾರತಿ ಜರುಗಿತು.
ಶುಕ್ರವಾರ ಶ್ರೀದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಕಳಾಶಾರಾಧನೆ, ಮಹಾ ಚಂಡಿಕಾಹೋಮ, ಪೂರ್ಣಾಹುತಿ, ರಕ್ಷಾಧಾರಣೆ, ಬಲಿಹರಣ, ಮಂಗಳದ್ರವ್ಯ ದರ್ಶನ, ಕದಲಿ ಛೇದನ, ಅಷ್ಠಾವಧಾನ, ಮಹಾ ನಿವೇದನೆ, ದಿವ್ಯದರ್ಶನ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು. ಖಂಡುಗದಹಳ್ಳಿ ಬೀದಿ ಬಸಪ್ಪ ಸ್ವಾಮಿ, ಹುಲುಬೆಂಕಿ ಬೀರಲಿಂಗೇಶ್ವರ ಸ್ವಾಮಿ, ಬಾಣಪ್ಪ ಸ್ವಾಮಿ, ಗ್ರಾಮ ದೇವತೆ ಅಂತರಘಟ್ಟಮ್ಮ ದೇವಿ, ಬನಶಂಕರಿ ದೇವಿ, ಕಟ್ಟೆಕೋಡಿ ಅಂತರಘಟ್ಟಮ್ಮ ದೇವಿ, ದುರ್ಗಾ ಪರಮೇಶ್ವರಿ ದೇವಿ, ಭೂತಪ್ಪ ಸ್ವಾಮಿ, ಗುಳ್ಳಮ್ಮದೇವಿಯನ್ನು ಆಹ್ವಾನಿಸಲಾಗಿತ್ತು. ದೇವಸ್ಥಾನ ಅಭಿವೃದ್ಧಿ ಮಂಡಳಿ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net