

ಕಲಾದಗಿ: ಗ್ರಾಮದಲ್ಲಿ ಶ್ರೀ ಚಿದಂಬರೇಶ್ವರ ಸೇವಾ ಸಮಿತಿಯಿಂದ ಹಮ್ಮಿಕೊಂಡಿರುವ ಅವತಾರ ಪುರುಷ ಶ್ರೀ ಶಿವಚಿದಂಬರ ಮಹಾಸ್ವಾಮಿಗಳ ಅಪ್ರಕಾಶಿತ ಲೀಲಾ ಪುರಾಣ ವಾಚನದ 60ನೇ ವರ್ಷದ ಪುರಾಣ ಮುಕ್ತಾಯ ಸಮಾರಂಭ ನಿಮಿತ್ತ ಸೆ. 14 ರಿಂದ 16ರ ವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೆ. 14 ರಂದು ಸಂಜೆ 4 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಮೆರವಣಿಗೆ, ನಂತರ ಸಭಾ ಮಂಟಪದಲ್ಲಿ ಪ್ರತಿಷ್ಠಾಪನೆ, ರಾತ್ರಿ 9 ಗಂಟೆಯಿಂದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಖ್ಯಾತ ಗಾಯಕ ಅನಂತ ಕುಲಕರ್ಣಿ ಅವರಿಂದ ದಾಸವಾಣಿ ನಡೆಯಲಿದೆ.ಸೆ. 15 ರಂದು ಸಂಜೆ 4 ಗಂಟೆಗೆ ಶ್ರೀಕಾಂತ ಮಮದಾಪುರ ಅವರಿಂದ ಪುರಾಣ ಮಂಗಲ, ತದನಂತರ ಕೀರ್ತನೆ, ಸಂಗೀತ ಸೇವೆ ಹಾಗೂ ಅಹೋರಾತ್ರಿ ಭಜನೆ ನಡೆಯಲಿದೆ.
ಸೆ. 16 ರಂದು ಬೆಳಗ್ಗೆ 8 ಗಂಟೆಯಿಂದ ಶ್ರೀ ಸತ್ಯಚಿದಂಬರ ಪೂಜೆ, ಬುತ್ತಿ ಪೂಜೆ, 12ಕ್ಕೆ ಶ್ರೀಗಳ ಸ್ವಾಗತ, ಶೋಭಾಯಾತ್ರೆ, ಆಶೀರ್ವಚನ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಶ್ರೀಕ್ಷೇತ್ರ ಕೆಂಗೇರಿ ಮುರುಗೋಡಮಠ, ಸವದತ್ತಿಯ ಚಿದಂಬರೇಶ್ವರ ಮಠ, ಆನಂದವನ ಅಗಡಿಯ ಶ್ರೀಮಠ, ಲೋಕಾಪುರದ ಶ್ರೀ ಜ್ಞಾನೇಶ್ವರ ಮಠ ಹಾಗೂ ಸಿಂದಗಿಯ ಶ್ರೀ ಭೀಮಾಶಂಕರ ಮಠಗಳ ಪೀಠಾಧ್ಯಕ್ಷ ದಿವಾಕರ ದೀಕ್ಷಿತರು, ಪ್ರಸನ್ನ ದೀಕ್ಷಿತರು, ಗುರುದತ್ತಮೂರ್ತಿ ಚರ್ಕವರ್ತಿಗಳು, ಬ್ರಹ್ಮಾನಂದ ಮಹಾಸ್ವಾಮಿಗಳು ಹಾಗು ದತ್ತಪ್ಪಯ್ಯ ಮಹಾಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಪಿ.ಸಿ. ಜೋಶಿ ಪ್ರಕಟಣೆ ತಿಳಿಸಿದ್ದಾರೆ.