

ತಿ.ನರಸೀಪುರ: ಪಟ್ಟಣದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ವರ್ಧಂತ್ಯುತ್ಸವ ವಿಜೃಂಭಣೆಯಿಂದ ಜರುಗಿತು.
ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಯುವ ಭಕ್ತ ಬಳಗದಿಂದ ಅಂಬಾರಿಯಲ್ಲಿ ವಿರಾಜಮಾನರಾಗಿರುವ ದೇವಿಯ ಭಾವಚಿತ್ರಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಮಹಾ ಮಂಗಳಾರತಿಯನ್ನು ಮಾಡಲಾಯಿತು. ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು.
ಸೇವಾಶ್ರಯ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಆರ್.ಮಣಿಕಂಠರಾಜ್ ಗೌಡ, ಸೋಸಲೆ ರಾಜೇಶ್, ಶಾಮಿಯಾನ ನಾಗೇಶ್, ಅಡುಗೆ ಪ್ರಭು, ಲೋಕೇಶ್, ಕಿರಣ್, ಅರ್ಜುನ್, ಪ್ರದೀಪ್, ಪ್ರಸಾದ್, ನವೀನ, ರಂಜಿತ್(ಪಿಂಕು ), ರಘು, ಜಯಶೀಲ, ನಾಗೇಂದ್ರ, ಕೆ.ಎನ್.ಅಶೋಕ್ ಇತರರು ಇದ್ದರು.