

ಮೈಸೂರು: ಹೂಟಗಳ್ಳಿ ಕೆ.ಎಚ್.ಬಿ. ಕಾಲನಿಯ ಶ್ರೀ ಚಾಮುಂಡೇಶ್ವರಿ ಅಮ್ಮನವರ ನೂತನ ದೇವಸ್ಥಾನದ ವಾಸ್ತುಶಾಂತಿ ಹಾಗೂ ಮೂರ್ತಿ ಪ್ರಾಣಪ್ರತಿಷ್ಠಾಪನ ಕಾರ್ಯಕ್ರಮ ಸೋಮವಾರ ಜರುಗಿತು.
ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಕೃತಕಾ ನಕ್ಷತ್ರದಲ್ಲಿ ಬೆಳಗ್ಗೆ 9.50 ರಿಂದ 10.30 ರ ನಡುವೆ ಸಲ್ಲುವ ಸಿಂಹ ಲಗ್ನದ ಶುಭ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಲಾಯಿತು. ಬೆಳಗ್ಗೆಯಿಂದಲೇ ಹೋಮ, ಹವನ ಸೇರಿದಂತೆ ನಾನಾ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಬಿಜೆಪಿ ಮುಖಂಡ ಕವೀಶ್ ಗೌಡ, ವಿಜಯನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಸುರೇಶ್, ಲಕ್ಷ್ಮೀಪುರಂ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿಶಂಕರ್, ಸೇವಾ ಸಮಿತಿ ಅಧ್ಯಕ್ಷ ಎಸ್.ಸಿದ್ದರಾಜು, ಗೌರವಾಧ್ಯಕ್ಷ ಎನ್.ಲೋಕೇಶ್, ಉಪಾಧ್ಯಕ್ಷ ಶಿವಮಲ್ಲು, ಪ್ರಧಾನ ಕಾರ್ಯದರ್ಶಿ ಎಸ್.ಕೆ.ರಾಘವೇಂದ್ರ, ಕಾರ್ಯದರ್ಶಿ ಸಿ.ಪಿ.ದಿನೇಶ್ ಕುಮಾರ್, ಜಂಟಿ ಕಾರ್ಯದರ್ಶಿ ಕೆ.ಬಿ.ದಿನೇಶ್, ಖಜಾಂಚಿ ನಾಗರಾಜು, ಕಾನೂನು ಸಲಹೆಗಾರ ಲೋಕೇಶ್, ಸಂಚಾಲಕ ಮಂಜುನಾಥ್ ಇತರರು ಇದ್ದರು.
ಶ್ರೀ ಚಾಮುಂಡೇಶ್ವರಿ ಅಮ್ಮನವರ ನೂತನ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ಜುಲೈ 18 ರಂದು ನಡೆಯಲಿದೆ. 17 ರಿಂದಲೇ ನಾನಾ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ.