ಶ್ರೀ ಭಗೀರಥ ವಿದ್ಯಾಶ್ರೀ ಪ್ರಶಸ್ತಿ ಪ್ರದಾನ

3
Published on

ಮೈಸೂರು: ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರ ಸಂಘದ ವತಿಯಿಂದ ಭಾನುವಾರ 27ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ ನೆರವೇರಿತು.

ನಗರದ ಕಲಾಮಂದಿರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶ್ರೀ ಭಗೀರಥ ವಿದ್ಯಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಅಂಶು ಐಸಿರಿ, ಯು.ಎಚ್.ನಿಶ್ಚಿತ, ಆರ್.ಅಭಯ ಕೃಷ್ಣ, ಆರ್.ಶ್ರೀವಲ್ಲಿ, ನಿರುಪಮ, ಬಿ.ಕೀರ್ತನ, ಎನ್.ವರ್ಷನಂದಿನಿ, ಎಂ.ಪೂರ್ಣಿಮ, ಬಿ.ಎಲ್.ಸಿದ್ದರಾಜು, ಬಿ.ಮಹದೇವ ಪ್ರಸಾದ್, ಮಾನಸ ಅವರಿಗೆ ಶ್ರೀ ಭಗೀರಥ ವಿದ್ಯಾಶ್ರೀ ಪ್ರಶಸ್ತಿ ಪಡೆದರು.

ಅಂತಾರಾಜ್ಯ ಕಿಕ್ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಪಡೆದ ಯಶವಂತ್ ಅವರಿಗೆ ‘ಶ್ರೀ ಭಗೀರಥ ಕ್ರೀಡಾರತ್ನ’ ಪ್ರಶಸ್ತಿ ನೀಡಲಾಯಿತು. ಕೆ.ಬಿ.ಯೋಗೇಶ್ ಮತ್ತು ಗೋಪಾಲಶೆಟ್ಟಿ ಅವರಿಗೆ ‘ಉತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜತೆಗೆ ಆರ್.ಗೌತಮ್ ರಾಜ್ ಅವರಿಗೆ ‘ಶ್ರೀ ಭಗೀರಥ ಕಲಾರತ್ನ’ ಪ್ರಶಸ್ತಿ, ಟಿ.ಕೀರ್ತಿಕುಮಾರ್ ಹಾಗೂ ಆರ್.ಲಕ್ಷ್ಮೀ ಅವರಿಗೆ ‘ಶ್ರೀ ಭಗೀರಥ ಸ್ಪರ್ಧಾ ವಿಜೇತ ರತ್ನ’, ವಿ.ವಿಕ್ರಮ್‌ಯೋಗಿ ಅವರಿಗೆ ‘ಶ್ರೀ ಭಗೀರಥ ಯೋಗಶ್ರೀ’ ನೀಡಿ ಗೌರವಿಸಲಾಯಿತು.


ಧಾರವಾಡದ ಕ್ಲಾಸಿಕ್ ಎಜುಕೇಶನ್ ಪ್ರೈ.ಲಿ. ನಿರ್ದೇಶಕ ಲಕ್ಷ್ಮಣ್ ಉಪ್ಪಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೀರಥ ಪೀಠದ ಶ್ರೀ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಹಾಗೂ ಅಯ್ಯನ ಸರಗೂರು ಮಠದ ಶ್ರೀ ಮಹದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜವರಶೆಟ್ಟಿ, ಆದಾಯ ತೆರಿಗೆ ಇಲಾಖೆ ಉಪ ನಿರ್ದೇಶಕ ಲಕ್ಕಪ್ಪ ಹನುಮಣ್ಣನವರ್, ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net