ಶ್ರೀ ಬನಶಂಕರಿ ದೇವಿ ರಥೋತ್ಸವ ಅದ್ದೂರಿ

14 KOTTUR 01
ಕೊಟ್ಟೂರಿನಲ್ಲಿ ಸೋಮವಾರ ಶ್ರೀ ಬನಶಂಕರಿದೇವಿ ರಥೋತ್ಸವ ಅದ್ದೂರಿಯಾಗಿ ಜರುಗಿತು.
Published on

ಕೊಟ್ಟೂರು: ಪಟ್ಟಣದ ಶ್ರೀ ಬನಶಂಕರಿ ದೇವಿಯ ರಥೋತ್ಸವ ಸೋಮವಾರ ಸಂಜೆ ಅದ್ದೂರಿಯಾಗಿ ಜರುಗಿತು. ಬನಶಂಕರಿ ದೇವಾಲಯದಿಂದ ಹೊರಟ ರಥೋತ್ಸವ ಪಟ್ಟಣ ಪ್ರಮುಖ ಬೀದಿಯಲ್ಲಿ ಸಾಗಿ ಪುನಾ ದೇವಾಲಯಕ್ಕೆ ಮರಳಿತು.

ಭಕ್ತರು ದೇವಿಗೆ ಹಣ್ಣು ಕಾಯಿ ಅರ್ಪಿಸಿದರು. ನಂತರ ರಥಕ್ಕೆ ಬಾಳೆ ಹಣ್ಣು ಮತ್ತು ಹೂವನ್ನು ಕೊಟ್ಟು ಭಕ್ತಿ ಸಮರ್ಪಿಸಿದರು. ಬೆಳಗ್ಗೆ ಬನಶಂಕರಿಗೆ ಕುಂಕುಮಾರ್ಚನೆ ಮತ್ತು ಹೋಮ ನಡೆಯತು. ಮಂಗಳವಾರ ಶ್ರೀ ಬನಶಂಕರಿ ದೇವಿಯ ಕಾರ್ತೀಕೋತ್ಸವ ಮತ್ತು ಪಲ್ಲಕ್ಕಿ ಉತ್ಸವ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net