ಕುಡುಪಲಿಯಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ

Kudupali Anjaneya Swami Rathotsava
Published on

ರಟ್ಟಿಹಳ್ಳಿ: ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಶ್ರೀ ವೀರಮಹೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ಆಂಜನೇಯ ಸ್ವಾಮಿಯ ದೊಡ್ಡ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ಗ್ರಾಮದ ಶ್ರೀ ವೀರಮಹೇಶ್ವರ ಮತ್ತು ಶ್ರೀ ಆಂಜನೇಯ ಸ್ವಾಮಿಗೆ ಪೂ ಸಲ್ಲಿಸಿ, 9.30 ಸುಮಾರಿಗೆ ರಥೋತ್ಸವಕ್ಕೆ ನೈವೇದ್ಯ ಸಮರ್ಪಿಸಿ ಚಾಲನೆ ನೀಡಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು, ತೆಂಗಿನಕಾಯಿ ಸಮರ್ಪಿಸಿ, ಸ್ವಾಮಿಯ ದರ್ಶನ ಮಾಡಿದರು. ರಥಬೀದಿಯಲ್ಲಿ ವಿವಿಧ ವಾದ್ಯಮೇಳದೊಂದಿಗೆ ಸಾಗಿದ ರಥೋತ್ಸವವು ಪುನಃ ಅದೇ ಮಾರ್ಗವಾಗಿ ಹಿಂದುರುಗಿ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net