

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆ ಸಸಿಹಿತ್ಲು ಆಶ್ರಯದಲ್ಲಿ ಮಂಗಳವಾರ ಸಂಸ್ಥೆಯ ವಜ್ರಮಹೋತ್ಸವ ದ ಅಂಗವಾಗಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಸಸಿಹಿತ್ಲು ಸ್ಟರ್ಲಿಂಗ್ ಫುಡ್ಸ್ ಪ್ರಾಯೋಜಕತ್ವದಲ್ಲಿ ನಡೆಯಿತು.
ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಅಧ್ಯಕ್ಷ ಸಂತೋಷ್ ಸಸಿಹಿತ್ಲು ಅಧ್ಯಕ್ಷತೆ ವಹಿಸಿದ್ದರು. ಸ್ಟರ್ಲಿಂಗ್ ಫುಡ್ಸ್ ಸಂಸ್ಥೆಯ ಆಪರೇಷನ್ ಮ್ಯಾನೇಜರ್ ವಿನಾಯಕ, ವಕೀಲೆ ಆಶಾ ನಾಯಕ್, ಕದಿಕೆ ಮೊಗವೀರ ಸಭಾ ಉಪಾಧ್ಯಕ್ಷ ಗಿರೀಶ್ ಶ್ರೀಯಾನ್, ಲಚ್ಚಿಲ್ ಮೊಗವೀರ ಸಭಾ ಅಧ್ಯಕ್ಷ ತಿಲಕ್, ಸಸಿಹಿತ್ಲು ಯುವತಿ ಮಂಡಲ ಅಧ್ಯಕ್ಷೆ ಬಬಿತಾ ಸಾಲಿಯಾನ್, ತುಳು ಸಂಶೋಧಕ ವಿ.ಕೆ.ಯಾದವ್, ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಮುಂಬೈ ಸಮಿತಿ ಉಪಾಧ್ಯಕ್ಷ ಪ್ರೇಮನಾಥ್ ಸುವರ್ಣ ಅತಿಥಿಗಳಾಗಿದ್ದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಲೆಫ್ಟಿನೆಂಟ್ ಸುರೇಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು. 53 ವಿದ್ಯಾರ್ಥಿಗಳಿಗೆ ಒಟ್ಟು 1,20,000 ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು. ಅನಿಲ್ ಕುಮಾರ್ ಸಸಿಹಿತ್ಲು ಪ್ರಸ್ತಾವನೆಗೈದರು. ವಿನೋದ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.