ಸೆಮಿಫೈನಲ್ಸ್, ಫೈನಲ್ ಹಣಾಹಣಿ ಇಂದು

spj suresh
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿ ನಡೆಯುತ್ತಿರುವ ಶ್ರೀ ಅಜಿತ ವಾಡೇಕರ್ ಟ್ರೋಫಿ-ರಾಷ್ಟ್ರ ಮಟ್ಟದ ದೈಹಿಕ ಅಂಗವಿಕಲರ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮಂಗಳವಾರ ಕೊನೆಗೊಂಡಿದ್ದು, ಸೌದರ್ನ್ ಸ್ಮ್ಯಾಷರ್ಸ್, ಸೆಂಟ್ರಲ್ ಕಮಾಂಡೋಸ್, ವೆಸ್ಟರ್ನ್ ರೇಂಜರ್ಸ್ ಹಾಗೂ ನಾರ್ದರ್ನ್ ಪ್ರಾಂಟಿಯರ್ಸ್ ತಂಡಗಳು ಸೆಮಿಫೈನಲ್ಸ್ ಪ್ರವೇಶಿಸಿವೆ.

ಲೀಗ್ ಹಂತದ ಎಲ್ಲ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಸೌದರ್ನ್ ಸ್ಮ್ಯಾಷರ್ಸ್ ತಂಡವು, ಮೊದಲ ಸೆಮಿಫೈನಲ್​ನಲ್ಲಿ ಬಿ ಗುಂಪಿನಲ್ಲಿ 2ನೇ ಸ್ಥಾನ ಪಡೆದ ನಾರ್ದರ್ನ್ ಪ್ರಾಂಟಿಯರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಏ. 3ರಂದು ಬೆಳಗ್ಗೆ 8.30ಕ್ಕೆ ನಡೆಯಲಿದೆ.

ಬಿ ಗುಂಪಿನಲ್ಲಿ ಲೀಗ್ ಹಂತದ ಎಲ್ಲ 3 ಪಂದ್ಯಗಳಲ್ಲಿ ಗೆಲುವಿನೊಂದಿಗೆ ಅಗ್ರಸ್ಥಾನ ಸಂಪಾದಿಸಿದ ವೆಸ್ಟರ್ನ್ ರೇಂಜರ್ಸ್ ಇನ್ನೊಂದು ಸೆಮಿಫೈನಲ್​ನಲ್ಲಿ ಎ ಗುಂಪಿನ ದ್ವಿತೀಯ ಸ್ಥಾನದ ಸೆಂಟ್ರಲ್ ಕಮಾಂಡೋಸ್ ತಂಡದೊಂದಿಗೆ ಸೆಣಸಲಿದೆ. ಈ ಪಂದ್ಯ ದೇಶಪಾಂಡೆನಗರ ಕೆಜಿಎ ಮೈದಾನದಲ್ಲಿ ಏ. 3ರಂದು ಬೆಳಗ್ಗೆ 8.30ಕ್ಕೆ ಆರಂಭಗೊಳ್ಳಲಿದೆ. ಮಧ್ಯಾಹ್ನ 1.30ಕ್ಕೆ ರಾಜನಗರ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಮಂಗಳವಾರ ಲೀಗ್ ಹಂತದ ಕೊನೆಯ 6 ಪಂದ್ಯಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net