

ಅರಕಲಗೂಡು: ಆಸ್ಟ್ರೇಲಿಯಾದ ಯೂನಿವರ್ಸಿಟಿ ಆಫ್ ವೆಸ್ಟ್ರನ್‌ನಲ್ಲಿ ಮಾಸ್ಟರ್ಸ್ ಆಫ್ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರೇಯಸ್ ಧರ್ಮೇಂದ್ರ ಇತ್ತೀಚೆಗೆ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು.
ತಾಲೂಕಿನ ರಾಮನಾಥಪುರ ಹೋಬಳಿಯ ಲಕ್ಕೂರು ಗ್ರಾಮದ ಧರ್ಮೇಂದ್ರ-ರತ್ನಕುಮಾರಿ ದಂಪತಿ ಪುತ್ರ ಶ್ರೇಯಸ್ ಧರ್ಮೇಂದ್ರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಮೈಸೂರಿನ ಸಿಎಫ್‌ಟಿಆರ್‌ಐ ಶಾಲೆಯಲ್ಲಿ, ಪಿಯುಸಿಯನ್ನು ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಹಾಗೂ ಬಿಇ ಸಿವಿಲ್ ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಮುಗಿಸಿದ್ದಾರೆ. ಎಂ.ಎಸ್ ಪದವಿಯನ್ನು ಯೂನಿವರ್ಸಿಟಿ ಆಫ್ ವೆಸ್ಟ್ರನ್ ಆಸ್ಟ್ರೇಲಿಯಾದಲ್ಲಿ ಪಡೆದಿದ್ದಾರೆ.