ಅಯೋಧ್ಯೆಯಿಂದ ವಾಪಸ್ಸಾದ ಗಣ್ಯರಿಗೆ ಭವ್ಯ ಸ್ವಾಗತ

AIRPORT NEW
Published on

ಹುಬ್ಬಳ್ಳಿ : ಅಯೋಧ್ಯೆಯ ಶ್ರೀ ರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡು ಮಂಗಳವಾರ ಹುಬ್ಬಳ್ಳಿಗೆ ವಾಪಸ್ಸಾದ ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ನಿರ್ದೇಶಕ ಶಂಕರಣ್ಣ ಮುನವಳ್ಳಿ, ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ, ವಿಎಚ್​ಪಿಯ ಡಾ. ರಾಮನಗೌಡರ ಹಾಗೂ ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಜಿತೇಂದ್ರ ಮಜೇಥಿಯಾ ಅವರಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಹಿಂದುಪರ ಸಂಘಟನೆ ಕಾರ್ಯಕರ್ತರು ಹಾಗೂ ನೂರಾರು ಸಂಖ್ಯೆಯಲ್ಲಿದ್ದ ಶ್ರೀರಾಮನ ಭಕ್ತರು, ಅಯೋಧ್ಯೆಯಿಂದ ವಾಪಸ್ಸಾದ ಗಣ್ಯರಿಗೆ ಹೂಮಾಲೆ ಹಾಗೂ ಶಾಲು ಹಾಕಿ ಸ್ವಾಗತಿಸಿದರು. ಶ್ರೀರಾಮನ ಪರ ಘೋಷಣೆಗಳನ್ನು ಕೂಗಿದರು.

ಸುಭಾಸಸಿಂಗ್ ಜಮಾದಾರ, ಪ್ರಸಾದ ಕರನಂದಿ, ಅಭಿಷೇಕ ಮೆಹ್ತಾ, ವಿಜಯ ಕ್ಷೀರಸಾಗರ, ಮಣಿಕಂಠ ಕಳಸ, ಗಿರೀಶ ಚವರ್ಗಿ, ವಿಶ್ವನಾಥ ಹಳ್ಯಾಳಕರ, ದೂದಾಬಾಯಿ ಚೌದರ, ತೋಟಪ್ಪ ನಿಡಗುಂದಿ, ಜಮತಾರಾಮ ಪಟೇಲ, ಗೋಪಾಲ ಪುರೋಹಿತ, ಕಶ್ಯಪ ಮಜೇಥಿಯಾ, ನಂದಿನಿ ಮಜೇಥಿಯಾ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net