

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ 7ನೇ ವಾರ್ಷಿಕ ಘಟಿಕೋತ್ಸವ ಫೆಬ್ರವರಿ 13 ರಂದು ಹಾಗೂ ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಪದವಿ ಪ್ರದಾನ ಕಾರ್ಯಕ್ರಮ ಫೆ. 15 ರಂದು ಸುರತ್ಕಲ್ ಮುಕ್ಕದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.
ಫೆ. 13 ರಂದು ಬೆಳಗ್ಗೆ 10 ಕ್ಕೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪ್ರೊ.ಪಿ.ಎಲ್. ಧರ್ಮ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ. 2233 ಪದವೀಧರರು ( ಸ್ನಾತಕೋತ್ತರ - 645, ಪದವಿ 1588) ಪ್ರಮಾಣಪತ್ರ ಸ್ವೀಕರಿಸಲಿದ್ದು, ವಿಶ್ವವಿದ್ಯಾಲಯವು ವಿವಿಧ ಕಾರ್ಯಕ್ರಮಗಳಿಗೆ 222 ರ‌್ಯಾಂಕ್‌ಗಳನ್ನು ಪ್ರಕಟಿಸಲಾಗಿದೆ. 46 ಪದವೀಧರರು ಘಟಿಕೋತ್ಸವದ ಸಮಯದಲ್ಲಿ ಕುಲಾಧಿಪತಿಗಳ ಚಿನ್ನದ ಪದಕ ಸ್ವೀಕರಿಸುತ್ತಾರೆ. ಘಟಿಕೋತ್ಸವದಲ್ಲಿ 64 ಪಿ.ಎಚ್.ಡಿ ಪದವಿ ನೀಡಲಾಗುವುದು ಎಂದು ಶ್ರೀನಿವಾಸ ವಿವಿ ರಿಜಿಸ್ಟ್ರಾರ್ ಡಾ.ಅನಿಲ್ ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ. 15 ರಂದು ಬೆಳಗ್ಗೆ 10 ಕ್ಕೆ ಜರಗುವ ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ. ಒಟ್ಟು 1187 ಪದವೀಧರರಿಗೆ ಪದವಿ ಪ್ರದಾನಿಸಲಾಗುವುದು ಎಂದು ಅವರು ಹೇಳಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಎ. ಶಾಮ ರಾವ್ ಫೌಂಡೇಶನ್ ಮಂಗಳೂರು ಅಧ್ಯಕ್ಷ ಡಾ.ಸಿಎ. ಎ. ರಾಘವೇಂದ್ರ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಹಾಗೂ ಎ.ಶಾಮ ರಾವ್ ಫೌಂಡೇಶನ್ ಉಪಾಧ್ಯಕ್ಷ ಡಾ.ಎ.ಶ್ರೀನಿವಾಸ್ ರಾವ್, ಆಡಳಿತ ಮಂಡಳಿ ಟ್ರಸ್ಟಿಗಳಾದ ಎ.ವಿಜಯಲಕ್ಷ್ಮೀ ಆರ್ ರಾವ್, ಪ್ರೊ.ಇ ಆರ್.ಎ.ಮಿತ್ರ ಎಸ್.ರಾವ್, ಪದ್ಮನಿ ಕುಮ್ರಾ , ಉಪ ಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ, ರಿಜಿಸ್ಟ್ರಾರ್‌ಡಾ. ಅನಿಲ್ ಕುಮಾರ್, ರಿಜಿಸ್ಟ್ರಾರ್ - ಮೌಲ್ಯಮಾಪನ ಡಾ.ಶ್ರೀನಿವಾಸ್ ಮಯ್ಯ , ರಿಜಿಸ್ಟ್ರಾರ್ - ಅಭಿವೃದ್ಧಿ ಡಾ. ಅಜಯ್ ಕುಮಾರ್ , ರಿಜಿಸ್ಟ್ರಾರ್ - ಶೈಕ್ಷಣಿಕ ಡಾ. ಆದಿತ್ಯ ಕುಮಾರ್ ಮಯ್ಯ ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ರಿಜಿಸ್ಟ್ರಾರ್-ಮೌಲ್ಯಮಾಪನ ಡಾ. ಶ್ರೀನಿವಾಸ್ ಮಯ್ಯ ಮತ್ತು ರಿಜಿಸ್ಟ್ರಾರ್-ಅಭಿವೃದ್ಧಿ ಡಾ.ಅಜಯ್ ಕುಮಾರ್ ಉಪಸ್ಥಿತರಿದ್ದರು.