

ಬೆಳಗಾವಿ : ಒಂದು ಚುನಾವಣೆಯಲ್ಲಿ ಸೋತ ಕಾರ್ಯಕರ್ತರನ್ನು ಉಪ ಮುಖ್ಯಮಂತ್ರಿ ಮಾಡಿದ ಪಕ್ಷ ನಮ್ಮ ಬಿಜೆಪಿ. ಈಗ ಅದನ್ನು ಕೆಲವರು ಸ್ವಾರ್ಥಕ್ಕಾಗಿ ತೊರೆದುಹೋಗಿದ್ದಾರೆ. ಅಂಥವರು ಹೊರ ಹೋಗಿದ್ದೇ ನಮಗೆ ಬಹಳ ಸಂತೋಷವಾಗಿದೆ ಎಂದು ಲಕ್ಷ್ಮಣ ಸವದಿ ವಿರುದ್ಧ ಶಾಸಕ ಶ್ರೀಮಂತ ಪಾಟೀಲ ಹರಿಹಾಯ್ದರು.
ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿನಅಥಣಿ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದ ಅವರು,
"ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡುತ್ತೇವೆಂದು ಹೇಳಿದ್ದಾರೆ. ನನ್ನ ಜೀವನದಲ್ಲಿಯೇ ನಾನೆಂದೂ ಸುಳ್ಳು ಹೇಳಿಲ್ಲ. ಯಾರಿಗೂ ಮೋಸ ಮಾಡಿಲ್ಲ. ನನ್ನಂದಿ ಅನ್ಯಾಯ ವಾಗಿದೆ ಎನ್ನುವವರು ಯಾರೂ ಇಲ್ಲ.ದುಡ್ಡು ಗಳಿಸುವುದಕ್ಕಾಗಿ ರಾಜಕಾರಣಕ್ಕೆ ಬಂದವನಲ್ಲ. ಜನ ನನ್ನನ್ನು ಆಯ್ಕೆಮಾಡುವವರೆಗೆ ಜನಸೇವೆಯನ್ನು ಆತ್ಮತೃಪ್ತಿಯಿಂದಲೇ ಮಾಡುತ್ತೇನೆ. ಕೊನೆಗೆ ಮನೆಗೆ ಹೋಗುವಾಗ ಖಾಲಿ ಕೈಯಲಿ ಹೋಗಿ, ದುಡಿದು ಮನೆ ನಡೆಸುತ್ತೇನೆ ಹೊರತು ಎಂದು ಹಣದ ಬೆನ್ನುಬಿದ್ದಿಲ್ಲ. ನನಗೆ ಜನಸೇವೆ ಮುಖ್ಯ" ಎಂದರು.
ಅಧಿಕಾರಾವಧಿಯಲ್ಲಿ ಕ್ಷೇತ್ರದ ಶೇ.98ರಷ್ಟು ರಸ್ತೆ ಡಾಂಬರೀಕರಣ ಮಾಡಲಾಗಿದೆ. ನೀರಾವರಿ ಹಾಗೂ ಶುದ್ಧಕುಡಿಯುವ ನೀರು, ಶಾಲೆಗಳಲ್ಲಿ ಸೌಲಭ್ಯ ಒದಗಿಸಿದ್ದೇನೆ. ಕಿಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ವಿಶೇಷ ಆದ್ಯತೆ ನೀಡಿ. ಪೈಪ್ ಲೈನ್, ವಿದ್ಯುತ್ ಸಂಪರ್ಕ, ಆರು ಕೋಟಿ ರೂ.ಕೈಯಿಂದ ಕೊಟ್ಟು ಪೂರ್ಣಗೊಳಿಸಿರುವೆ. ಕೆಲವೇ ದಿನಗಳಲ್ಲಿ ಇಲ್ಲಿ ನೀರು ತಂದು ತೋರಿಸುತ್ತೇನೆ. ಮತ್ತೊಮ್ಮೆ ಆಶೀರ್ವಾದ ಮಾಡಿದರೇ ಐದೇ ವರ್ಷದಲ್ಲಿ ಅದನ್ನು ಸಾಧಿಸಿ ತೋರುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೀರಾವರಿಗೆ ಕೈಯಿಂದಲೇ ಕೋಟ್ಯಂತರ ರೂ.ಹಾಕಿರುವೆ
ಚುನಾವಣೆಯ ಪ್ರಚಾರಕ್ಕಿಂತ ಹೆಚ್ಚಾಗಿ ರೈತರ ಏಳಿಗೆಗಾಗಿ ಹೆಚ್ಚು ಕಾರ್ಯೋನ್ಮುಖನಾಗಿರುವೆ. ಕ್ಷೇತ್ರದಲ್ಲಿ ನೀರಿಲ್ಲದೆ ಬೆಳೆ ಒಣಗುತ್ತಿರುವುದನ್ನು ಮನಗಂಡು ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವಿಸ್ ಅವರಿಗೆ ಮೂರು ಟಿಎಂಸಿ ನೀರು ಕೃಷ್ಣಾ ನದಿಗೆ ಬಿಡಲು ಮನವಿ ಮಾಡಿರುವೆ. ಜನ ಜಾನುವಾರು ಅನುಭವಿಸುವ ಕಷ್ಟ ಮನವರಿಕೆ ಮಾಡಿದ್ದು, ಸಕಾರಾತ್ಮಲವಾಗಿ ಸ್ಪಂದಿಸಿದ್ದಾರೆ. ಇನ್ನೇನು ಎರಡ್ಮೂರು ದಿನದಲ್ಲಿ ನೀರು ಹರಿಯಲಿದೆ ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಹೇಳಿದರು.
ಕಳೆದೆರಡು ಚುನಾವಣೆಯಲ್ಲಿ ನಮಗೆ ಪ್ರೀತಿ ವಿಶ್ವಾಸಕೊಟ್ಟು ಆಯ್ಕೆ ಮಾಡಿದ್ದೀರ. ಐದು ವರ್ಷಗಳ ಅವಧಿಯಲ್ಲಿ ಸಚಿವನಾಗಿಯೂ ಕೆಲಸ ಮಾಡಿರುವೆ. ಅದರಲ್ಲಿ ಎರಡು ವರ್ಷ ಕರೊನಾದಲ್ಲಿಯೇ ಕಳೆದಿದೆ.ಇನ್ನೂಳಿದ ಅವಧಿಯಲ್ಲಿ ನನ್ನ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಎಂದೂ ಜಾತಿ ಧರ್ಮದ ಭೇದಭಾವ ಮಾಡಿಲ್ಲ.ಬಕಷ್ಟ ಎಂದು ಬಂದ ಜನರನ್ನು ಜಾಗೃತ ದೇವರೆಂದು ಅವರಿಗೆ ಕೈಲಾದ ಸೇವೆ ಮಾಡಿರುವೆ. ಬಸವೇಶ್ವರ ಏತನೀರಾವರಿ ಯೋಜನೆಯ ಕಾಮಗಾರಿ ಮುಕ್ತಾಯಗೊಳಿಸಲು ಸರ್ಕಾರದ ಅನುದಾನ ಬರುವುದು ತಡವಾಗಿದದರಿಂದ ನಾನೇ ನನ್ನ ಸ್ವಂತ 6 ಕೋಟಿ ರೂ.ಕೊಟ್ಟು ಕೆಲಸ ಮಾಡಿಸಿರುವೆ ಎಂದರು
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ,
ರೈತ ಮೋರ್ಚಾ ಅಧ್ಯಕ್ಷ ದುಂಡಪ್ಪ ಬೆಂಡವಾಡ, ಶೀತಲ ಪಾಟೀಲ, ಮಹಾದೇವ ಕೋರೆ, ಉತ್ತಮ ಪಾಟೀಲ, ಅಭಯ ಪಾಟೀಲ, ಆರ್.ಎಂ.ಪಾಟೀಲ, ತಮ್ಮಣ್ಣ ಪಾರಶೆಟ್ಟಿ, ಸಂಜಯ ತೆಲಸಂಗ, ದಾದಾ ಶಿಂಧೆ, ಶ್ರೀನಿವಾಸ ಪಾಟೀಲ, ಯೋಗೇಶ ಪಾಟೀಲ, ಸುಶಾಂತ ಪಾಟೀಲ, ರಾಕೇಶ ಪಾಟೀಲ, ಮುರಿಗೆಪ್ಪ ಮಗದುಪ್ಪ ಸೇರಿದಂತೆ ಇತರರು ಇದ್ದರು.