

ಜೊಯಿಡಾ: ತಾಲೂಕಿನ ಕುಂಬಾರವಾಡ ಸಮೀಪದ ಕಳಸಾಯಿ ಗ್ರಾಮದಲ್ಲಿ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದರು ಶನಿವಾರ ಇಷ್ಟಲಿಂಗ ಮಹಾಪೂಜೆ, ಮೌನಾನುಷ್ಠಾನ ಆರಂಭಿಸಿದ್ದು, ಆಗಸ್ಟ್ 12 ರಂದು ಧರ್ಮಸಭೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಈ ಅವಧಿಯಲ್ಲಿ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಶ್ರೀಗಳಿಂದ ಇಷ್ಟಲಿಂಗ ಮಹಾಪೂಜೆ ಆರಂಭವಾಗುತ್ತದೆ. ಭಕ್ತರೂ ಮಾಹಾಪೂಜೆಯಲ್ಲಿ ಭಾಗವಹಿಸಬಹುದು. ಮತ್ತು ಪ್ರತಿದಿನ ಸಾಯಂಕಾಲ 4 ರಿಂದ 5 ಗಂಟೆಯವರೆಗೆ ಜಗದ್ಗುರುಗಳು ಆಶ್ರಮಕ್ಕೆ ಆಗಮಿಸುವ ಭಕ್ತರಿಗೆ ದರ್ಶನ, ಆಶಿರ್ವಾದ ನೀಡುತ್ತಾರೆ.
ಆಗಸ್ಟ್ 12 ರಂದು ಬೆಳಿಗ್ಗೆ 7 ಗಂಟೆಗೆ ಇಷ್ಟಲಿಂಗ ಮಹಾಪೂಜೆ ಹಾಗೂ ಬೆಳಿಗ್ಗೆ 11 ಗಂಟೆಗೆ ಧರ್ಮಸಭೆ ಜರುಗಲಿದ್ದು, ನಂತರ ಶ್ರೀಗಳ ಮೌನಾನುಷ್ಠಾನ ಮುಕ್ತಾಯಗೊಳ್ಳಲಿದೆ.
ಇದ್ದನ್ನೂ ಓದಿ:ರಾಷ್ಟ್ರೀಯ ಲೋಕ ಅದಾಲತ್ ಸೆಪ್ಟೆಂಬರ್ 9ರಂದು
ಈ ಅಧಿಕ ಶ್ರಾವಣ ಮಾಸವು 19 ವರ್ಷಗಳ ನಂತರ ಬಂದಿದ್ದು, ಈ ಸಮಯದಲ್ಲಿ ಜಪ, ಪೂಜೆ, ಅಭಿಷೇಕ, ಪಾರಾಯಣ, ಪುರಾಣ, ಪ್ರವಚನ ಕಾರ್ಯಕ್ರಮದಲ್ಲಿ ಭಾಗಿ ಆಗುವದರಿಂದ ಶ್ರೇಷ್ಠ ಫಲ ದೊರಕುತ್ತದೆ.
ನಾಡಿನ ಸಮೃದ್ಧಿ ಮತ್ತು ಭಕ್ತರ ಸುಮಂಗಲಕ್ಕಾಗಿ ನಿಸರ್ಗರಮಣೀಯ ತಪೋಭೂಮಿಯಲ್ಲಿ ಜಗದ್ಗುರುಗಳು ಮೌನಾಚರಣೆ ಕೈಗೊಂಡಿದ್ದಾರೆ ಎಂದರು.
ಎಲ್ಲಿದೆ ಈ ಗ್ರಾಮ:
ಕಳಸಾಯಿ ಗ್ರಾಮ ಉಳವಿ ರಸ್ತೆಯಲ್ಲಿದ್ದು, ದಾಂಡೇಲಿ, ಜೊಯಿಡಾ, ಕುಂಬಾರವಾಡ, ಪಂದರ ಗ್ರಾಮ ಮಾರ್ಗವಾಗಿ ಹೋಗಬೇಕು. ಕಳಸಾಯಿ ಗ್ರಾಮವು ದಾಂಡೇಲಿಯಿಂದ ಸುಮಾರು 40 ಕೀ.ಮಿ ದೂರದಲ್ಲಿದೆ. ಕಳಸಾಯಿಂದ ಉಳವಿ 20 ಕಿಮೀ ದೂರದಲ್ಲಿದೆ