ಸವಣೂರಿನಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ

sharada
Published on

ಕಡಬ: ಸವಣೂರು ಶ್ರೀ ಶಾರದಾಂಬಾ ಸೇವಾ ಸಂಘ ವತಿಯಿಂದ ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವವು ಶನಿವಾರ ನಡೆಯಿತು.

ಬೆಳಗ್ಗೆ ಉದಯ ಕುಮಾರ್ ಸರ್ವೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ಶ್ರೀ ದೇವಿಯ ಪ್ರತಿಷ್ಠಾಪನೆ, ಗಣಹೋಮ, ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಶಾರದಾ ಮೂರ್ತಿಯ ಶೋಭಾಯಾತ್ರೆ ಮುಖ್ಯ ರಸ್ತೆಯಲ್ಲಿ ಸಾಗಿ ಸರ್ವೆ ಗೌರಿ ಹೊಳೆಯಲ್ಲಿ ಜಲಸ್ಥಂಭನ ನಡೆಯಿತು.

ಸಮಿತಿಯ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಅಧ್ಯಕ್ಷ ವಸಂತ ರೈ ಸೊರಕೆ, ಕಾರ್ಯದರ್ಶಿ ವೆಂಕಪ್ಪ ಗೌಡ ಅಡೀಲು, ಉಪಾಧ್ಯಕ್ಷರಾದ ಕುಂಞ ನಲಿಕೆ, ಕೋಶಾಧಿಕಾರಿ ಎಂ.ಟಿ.ಗಿರಿಧರ ಗೌಡ ಮೆದು, ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕ್ಕೋಡಿ, ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಇಂದ್ರ, ಗೌರವ ಸಲಹೆಗಾರರಾದ ಎನ್.ಸುಂದರ ರೈ ಸವಣೂರು ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net