ಶ್ರೀರಾಮ ಮಂದಿರದ ಬಗ್ಗೆ ಕಾಂಗ್ರೇಸ್ ನಾಯಕರ ಅವಹೇಳನಕಾರಿ ಹೇಳಿಕೆ ಸಹಿಸಲ್ಲ: ರಾಜೂ ಖಾನಪ್ಪನವರ

20GDG02
Published on

ಗದಗ: ಶ್ರೀರಾಮ ಮಂದಿರ ನಿರ್ಮಾಣ ಜಗತ್ತಿನ ಎಲ್ಲ ಹಿಂದೂಗಳಿಗೆ ಖುಷಿಯ ವಿಚಾರ. ಸಾವಿರಾರು ಹೋರಾಟಗಾರರು ರಾಮ ಮಂದಿರ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಮಂದಿರ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಆದರೆ, ಕಾಂಗ್ರೇಸ್ ನವರು ರಾಮ ಮಂದಿರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ರಾಜೂ ಖಾನಪ್ಪನವರ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯನವರ ಹೆಸರಿನಲ್ಲಿ ಪ್ರತಿನಿತ್ಯ ರಾಮನ ಹೆಸರು ಉಚ್ಛಾರವಾಗುತ್ತೆ. ಹಿಗಾಗಿ ರಾಮನ ಬಗ್ಗೆ ಸಿಎಂ ಗೆ ಭಕ್ತಿ ಇರಲಿ. ಅಗೌರವ ಬೇಡ. ದೇಶದ ಹಲವು ರಾಜ್ಯಗಳಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಇದೂವರೆಗೂ ರಜೆಯ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಕೂಡಲೇ ರಾಜ್ಯ ಸರ್ಕಾರ ರಜೆಯ ಬಗ್ಗೆ ಆದೇಶಿಸಬೇಕು ಎಂದು ಮನವಿ ಮಾಡಿದರು.

ಉದ್ಘಾಟನೆ ದಿನದಂದು ರಾಮನ 8ಪುಟಿನ ಭವ್ಯ ಮೂರ್ತಿ ಮೇರವಣಿಗೆ ನಡೆಸಲು ತಿರ್ಮಾನಿಸಲಾಗಿತ್ತು. ಆದರೆ, ಪೋಲಿಸರ ಮುಖಾಂತರ ನಮ್ಮ ಮೇರವಣಿಗೆ ಮೇಲೆ ನಿಯಂತ್ರಣ ಹೇರಲಾಗುತ್ತಿದೆ. ನಮ್ಮ ಮೇರವಣಿಗೆಗೆ ಅವಕಾಶ ನೀಡದಿರುವುದು ಬೇಸರದ ಸಂಗತಿ. ಜೊತೆಗೆ, ಜಿಲ್ಲೆಯ ಎಲ್ಲ ಬಾರ್ ಅಸೋಷಿಯಶೆನ್ ಮತ್ತು ಮಾಂಸದಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಮೇರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಎಲ್ಲ ವ್ಯಾಪಾರಸ್ಥರು ತಮ್ಮ ದಿನನಿತ್ಯದ ಕೇಲಸ ಸ್ಥಗಿತಗೋಳಿಸಿ ಮೇರವಣಿಗೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಪ್ರೀಯಾಂಕ ಖರ್ಗೆ ಪದೇ-ಪದೇ  ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಆದರೆ, ಪ್ರೀಯಾಂಕಾ ಖರ್ಗೆಗೆ ಪ್ರಭು ಶ್ರೀರಾಮ ಚಂದ್ರನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. 500ವರ್ಷಗಳ ಹೋರಾಟದ ನಂತರ ಕಾನೂನಾತ್ಮಕವಾಗಿ ಜಯ ಸಿಕ್ಕಿದೆ. ಹಿಗಿದ್ದರೂ ಕಾನೂನಿನ ವಿರುದ್ದವಾಗಿ ಪ್ರೀಯಾಂಕಾ ಖರ್ಗೆ ಮಾತನಾಡುತ್ತಿದ್ದಾರೆ. ಅವರು ಡಾ. ಬಾಬಾ ಸಾಹೇಬ್  ಅಂಬೇಡ್ಕರ್ ಅನುಯಾಯಿಗದ್ದವರು ಅಂಬೇಡ್ಕರ್ ಸಂವಿಧಾನವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ನಿವು ಹಿಂದೂಗಳ ಬಗ್ಗೆ, ರಾಮನ ಬಗ್ಗೆ ಈ ತರ ಹೇಳಿಕೆ ನೀಡುತ್ತಿರುವುದು ಸಂವಿಧಾನಕ್ಕೆ ಅವಮಾನ ಮಾಡಿದಂತೆ ಎಂದು ಸಚಿವ ಪ್ರೀಯಾಂಕಾ ಖರ್ಗೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಹೇಶ್ ರೋಖಡೆ, ಸೋಮು ಗುಡಿ, ಬಸವರಾಜ ಕುರ್ತಕೊಟಿ, ಶಿವಯೋಗಿ ಹಿರೇಮಠ, ಮಹಾಬಳೇಶ ಶೆಟ್ಚರ, ಮೌನೇಶ್ ಚನ್ನದಾಸರ್, ಸತೀಶ್ ಕುಂಬಾರ, ಮಂಜು ಪೂಜಾರ, ರಾಮು ಗೌಡರ್, ಸುನೀಲ್ ಮುಳ್ಳಾಳ, ಈರಣ್ಣ ಹೋಸಮನಿ, ಅನಿಲ ಮುಳ್ಳಾಳ, ಮುದಕಪ್ಪ ಬಂಡಿವಡ್ಡರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net