ಶ್ರೀರಾಮನ ಜೀವನವೇ ನಮ್ಮ ಜೀವನ ಮೌಲ್ಯ ಹೆಚ್ಚಿಸಿಕೊಳ್ಳುವ ಮಾರ್ಗ: ರಾಜು ಖಾನಪ್ಪನವರ.

16GDG04
Published on

ವಿಜಯವಾಣಿ ಸುದ್ದಿಜಾಲ ಗದಗ
ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ನಗರದ ಪಂಚಮೂತಿರ್ ಹಾಗೂ ನವಗ್ರಹ ದೇವಸ್ಥಾನ ಹತ್ತಿರ ಸೋಮವಾರ ಸಂಜೆ ಆರಂಭಗೊಂಡ 7 ದಿಗನಳ ಕಾಲ ಶ್ರೀರಾಮನ ಕೀರ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶ್ರೀರಾಮ ಸೇನೆ ರಾಜ್ಯ ಕಾರ್ಯದಶಿರ್ ರಾಜು ಖಾನಪ್ಪನ್ನವರ ಮಾತನಾಡಿ, ದೇಶದ ಸಮಸ್ತ ಹಿಂದೂಗಳ ಐದು ಶತಮಾನಗಳ ಕನಸಾಗಿರುವ ಆರಾಧ್ಯ ದೈವ, ಸದ್ಗುಣಗಳ ಸಾಗರ, ಸತ್ಯ, ಸೌಹಾರ್ದತೆ, ದಯೆ, ಮೆ, ಮೃದುತ್ವ, ಧೀರತೆ, ವೀರತೆ, ಗಾಂಭೀರ್ಯ, ಅಸ್ತ್ರ&ಶಸ್ತ್ರಗಳ ಜ್ಞಾನಿ, ಪರಾಕ್ರಮಿ, ನಿರ್ಭಯತೆ, ವಿನಯ, ಶಾಂತಿಯ ಪ್ರತಿಕ ಪ್ರಭು ಶ್ರೀರಾಮನಚಂದ್ರನ ಭವ್ಯ ಮಂದಿರ ಉಧ್ಘಾಟನೆಗೆ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಮಂದಿರ ಲೋಕಾರ್ಪಣೆಯ ದಿನವು ಸಮಸ್ತ ಹಿಂದೂಗಳಿಗೆ ಬಹುದೊಡ್ಡ ಹಬ್ಬವಾಗಿದೆ. ಶ್ರೀರಾಮಚಂದ್ರನ ಜೀವನವೇ ನಮ್ಮ ಜೀವನ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಮಾರ್ಗ ಎಂದರು.
ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಆಧ್ಯಾತ್ಮಿಕ ಚಿಂತಕ ರತ್ನಾಕರ ಜೋಶಿ, ರಾಮ ಜಪದಿಂದ ನಮ್ಮ ಸರ್ವ ಕಷ್ಟಗಳ ನಿವಾರಣೆಗೆ ಹಾಗೂ ನೆಮ್ಮದಿಗೆ ಜೀವನಕ್ಕೆ ಸುಗಮದಾರಿ ಎಂದು ತಿಳಿಸಿದರು.
ದಿಗಂಬರ ಶಾಸ್ತ್ರಿಗಳು ಕಿರ್ತನೆ ಪ್ರಸ್ತುತ ಪಡಿಸಿದರು. ಕಿರಣ ಇನಾಮದಾರ, ಶ್ರೀಕಾಂತ ಹೂಲಿಯವರ, ಚಂದ್ರಶೇಖರ ತಡಸದ, ಶಿವಪುತ್ರಪ್ಪ ಬೇವಿನಮರದ, ಗುರುಬಸವಲಿಂಗ ದಾನಪ್ಪ ತಡಸದ, ಬಸವರಾಜ ದೇಗುಲ, ಸೋಮು ಗುಡಿ, ಮಹೇಶ ರೋಖಡೆ, ದಾನೇಶ ತಡಸದ, ಶರಣೇಶ ಇಟಗಿ, ಕುಮಾರ ಮಾರನಬಸರಿ, ಅನಿಲ ಶೆಟ್ಟರ ಹಲವರು ಇದ್ದರು.

ೋಟೋ 16ಜಿಡಿಜಿ04
ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಗದಗ ನಗರದ ಆರಂಭಗೊಂಡ ಶ್ರೀರಾಮನ ಕೀರ್ತನೆ ಕಾರ್ಯಕ್ರಮವನ್ನು ರತ್ನಾಕರ ಜೋಶಿ ಉದ್ಘಾಟಿಸಿದರು. ರಾಜು ಖಾನಪ್ಪನ್ನವರ, ಚಂದ್ರ ತಡಸದ, ಮಹೇಶ ರೋಖಡೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net