ಶ್ರೀರಾಮ ಪ್ರಾಣ ಪ್ರತಿಷ್ಠಾನ: ವಾರ್ಡ್​ ನಂ13 ರಲ್ಲಿ ರ್ಪೂಣ ಕುಂಬ ಮೆರವಣಿಗೆ

23GDG05
ಗದಗ ವಾರ್ಡ್​ ನಂ 13 ರಲ್ಲಿ ಶ್ರೀರಾಮೋತ್ಸವ ನಿಮಿತ್ಯ ರ್ಪೂಣ ಕುಂಬದೊಂದಿಗೆ ಮಹಿಳೆಯರು ಮೆರವಣಿಗೆ ನಡೆಸಿದರು. ಮುತ್ತ ಮುಶೀಗೇರಿ, ಡಾ. ಶೇಖರ ಸಜ್ಜನರ, ಗುರುರಾಜ ತಿಲ್ಲಿಹಾಳ, ನಾಗರಾಜ ಉಮಚಗಿ, ರಾಜು ಕೊಣ್ಣೂರ, ವಿಜಯಕುಮಾರ ಹಿರೇಮಠ, ಈಶ್ವರ ಬಂಟೂರ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ, ಗದಗ
ಶ್ರೀರಾಮ ಪ್ರಾಣ ಪ್ರತಿಷ್ಠಾನ ನಿಮಿತ್ಯ ನಗರಸಭೆಯ ವಾರ್ಡ ನಂ. 13 ರ ರೇಲ್ವೆ ಕ್ವಾರ್ಟಸ್​ ಗಣಪತಿ ದೇವಸ್ಥಾನದ ಆವರಣದಲ್ಲಿ ಸೋಮವಾರ ರ್ಪೂಣಕುಂಬ ಮೆರವಣಿಗೆ ಜರುಗಿತು. ಮಕ್ಕಳೊಂದಿಗೆ ನೂರಾರು ಮಹಿಳೆಯರು ಕುಂಭಮೇಳದೊಂದಿಗೆ, ವಾದ್ಯಗಳೊಂದಿಗೆ ಶ್ರೀರಾಮ, ಜಯ ರಾಮ, ಜಯ ಜಯ ರಾಮ ಎಂಬ ೂಷಣೆಯೊಂದಿಗೆ ರೇಲ್ವೆ ಕ್ವಾರ್ಟಸ, ವಕೀಲ ಚಾಳ, ಸ್ಟೇಷನ್​ ರೋಡದಲ್ಲಿ ಮೆರವಣಿಗೆ ಸಂಚರಿಸಿ ಸಂಗೊಳ್ಳಿ ರಾಯಣ್ಣ ಸರ್ಕಲ್​ದ ಮುಖಾಂತರ ಗಣಪತಿ ದೇವಸ್ಥಾನ ಮುಕ್ತಾಯಗೊಂಡಿತು. ಮಕ್ಕಳು ರಾಮ ಸೀತೆ ಲಕ್ಷ$್ಮಣ ವೇಷಬೂಷಣ ಧರಿಸಿ ಕಂಗೊಳಿಸಿದರು.
ಶ್ರೀರಾಮ, ಗಣಪತಿ ಮತ್ತು ಮಾರುತಿ ದೇವರುಗಳಿಗೆ ಬಿಲ್ವಾರ್ಚನೆ ಪೂಜೆಯೊಂದಿಗೆ, ಸುಮಂಗಲೆಯರಿಗೆ ಉಡಿ ತುಂಬುವ ಶ್ರೀರಾಮ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಭಕ್ತರಿಸಿದ ಅನ್ನಸಂತರ್ಪಣೆ ವಿತರಿಸಲಾಯಿತು. ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾನದ ನೇರ ಪ್ರಸಾರವನ್ನು ಗಣಪತಿ ದೇವಸ್ಥಾನ ಆವರಣದಲ್ಲಿ ಎಲ್​ಇಡಿ ಪರದೆಯ ಮೂಲಕ ಎಲ್ಲರಿಗೂ ವಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ನಗರಸಭೆ ಸದಸ್ಯ ಮುತ್ತು ಮುಶಿಗೇರಿ ಮತ್ತು ಶೃತಿ ಮುಶಿಗೇರಿ ದಂಪತಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಡಾ. ಶೇಖರ ಸಜ್ಜನರ, ಗುರುರಾಜ ತಿಲ್ಲಿಹಾಳ, ನಾಗರಾಜ ಉಮಚಗಿ, ರಾಜು ಕೊಣ್ಣೂರ, ವಿಜಯಕುಮಾರ ಹಿರೇಮಠ, ಈಶ್ವರ ಬಂಟೂರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net