ಕರಿಯಮ್ಮಕಲ್ಲ ಬಡಾವಣೆ, ವಿನಾಯಕ ದೇವಸ್ಥಾನದಲ್ಲಿ ಶ್ರೀರಾಮೋತ್ಸವ

23GDG04
ಗದಗ ವಾರ್ಡ್​ ನಂ 12ರ ವಿನಾಯಕ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಶ್ರೀರಾಮೋತ್ಸವ ಕಾರ್ಯಕ್ರಮವನ್ನು ವಿಜಯಲಕ್ಷಿ$್ಮ ದಿಂಡೂರು ಉದ್ಘಾಟಿಸಿದರು. ಶಶಿಶಧರ ದಿಂಡೂರು, ರಾಣಿ ಚಂದಾವರಿ, ವಾಣಿ ಭಟ್​, ಯೋಗೇಶ ಮೋರಾ, ಪ್ರದಿಪಕುಮಾರ, ಸಿದ್ಲಿಂಗೇಶ ಕಾಳಗಿ, ಅನಂತ ಕಾರ್ಕಳ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ರಾಷ್ಟ್ರೀಯತೆಗೆ ಮತ್ತು ಸನಾತನ ಧರ್ಮವನ್ನು ಒಗ್ಗೂಡಿಸಿ ಮುನ್ನಡೆಸಲು ಶ್ರೀರಾಮೋತ್ಸ ಒಂದು ಮಹತ್ವದ ಹೆಜ್ಜೆ ಆಗಿದೆ ಎಂದು ನಗರಸಭೆ ಸದಸ್ಯೆ ವಿಜಯಲಕ್ಷಿ$್ಮ ಶಶಿಧರ ದಿಂಡೂರು ಹೇಳಿದರು.
ಕರಿಯಮ್ಮಕಲ್ಲ ಬಡಾವಣೆಯ ಹನುಮಾನ ದೇವಸ್ಥಾನ,12ನೇ ವಾರ್ಡ ಗಣಪತಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಶ್ರೀರಾಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾತಿ, ಧರ್ಮ, ವರ್ಣ, ಭಾಷೆ, ಪ್ರದೇಶ ಎಲ್ಲವನ್ನೂ ಮರೆತು ಶ್ರೀರಾಮ ಭಕ್ತಿಯಲ್ಲಿ ಎಲ್ಲರು ಒಂದಾಗಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೂಲಕ ಕೋಟ್ಯಾಂತರ ಭಾರತೀಯರ ಕನಸಾದ ಪ್ರಭು ರಾಮನ ಪ್ರತಿಷ್ಠಾಪನೆ ನನಸಾಗಿರುವುದು ವಿಶ್ವಕ್ಕೆ ಹೆಮ್ಮಯ ವಿಷಯ. ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ನಂತರ ನಡೆದ ಮತ್ತೊಂದು ದೊಡ್ಡ ಹೋರಾಟವೇ ರಾಮ ಜನ್ಮಭೂಮಿಗೆ ನಡೆದ ಹೋರಾಟ. ಇದಕ್ಕಾಗಿ ಮನೆ, ಮಠ, ಪ್ರಾಣದ ಹಂಗು ತೊರೆದು ಹೋರಾಡಿದ ಮಹಾನ್​ ಕರಸೇವಕರನ್ನು ಸ್ಮರಿಸಿಕೊಳ್ಳಬೇಕು ಎಂದರು.
ಸನಾತನ ಸಂಸ್ಥೆಯ ಸಾಧಕಿ ಸೌ. ವಿದುಲಾ ಹಳದೀಪುರ ಮಾತನಾಡಿ, ಅಯೋಧ್ಯೆಯಲ್ಲಿ ಅದ್ಭುತವಾಗಿ ನಿರ್ಮಾಣಗೊಂಡು ಲೋಕಾರ್ಪಣೆ ಆಗಿರುವ ರಾಮ ಮಂದಿರವು ಆಧುನಿಕ ಭಾರತದ ಇತಿಹಾಸದ ಮುಖಟಪ್ರಾಯವಾಗಿದೆ. ಮರ್ಯಾದೆ ಪುರುಷೋತ್ತಮ ಶ್ರೀರಾಮ ಭಾರತವಲ್ಲದೆ ಸಮುದ್ರದ ಆಚೆಯಲ್ಲಿಯ ಮನೆ ಮನಗಳಲ್ಲಿ ರಾಮನಾಮ ಜಪ, ಶ್ರೀರಾಮೋತ್ಸವ ನಡೆದಿದ್ದು ನಿಜಕ್ಕೂ ಭಾರತದ ಸನಾತನದ ವಿಶೇಷತೆಯನ್ನು ಅರ್ಥ ಮಾಡಿಸುತ್ತಿದೆ ಎಂದರು.
ಬಿ.ಪ್ರಸನ್ನಕುಮಾರ ಅಧ್ಯಕ್ಷತೆ ವಹಿಸಿದ್ದರು. ಕಥಾ ಕೀರ್ತನ, ಖ್ಯಾತ ಗಾಯಕರಿಂದ, ಕಲಾವಿದರಿಂದ ಸಂಗೀತ, ಸಾಂಸತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಜರುಗಿತು.
ರಾಣಿ ಚಂದಾವರಿ, ವಾಣಿ ಭಟ್​, ಯೋಗೇಶ ಮೋರಾ, ಪ್ರದಿಪಕುಮಾರ, ಸಿದ್ಲಿಂಗೇಶ ಕಾಳಗಿ, ಅನಂತ ಕಾರ್ಕಳ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net