ಶ್ರೀ ಮುತ್ತಪ್ಪ ತೆರೆ ಮಹೋತ್ಸವ ಸಂಪನ್ನ

11 vpt 3.2
Published on


ಕೊಡಗು : ವಿರಾಜಪೇಟೆಯ ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕ ಶ್ರೀ ಮುತ್ತಪ್ಪ ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಇತ್ತೀಚೆಗೆ ನೆರವೇರಿತು.


ಮಂಗಳವಾರ ಬೆಳಗ್ಗೆ ಗಣಪತಿ ಹೋಮದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಧ್ವಜಾರೋಹಣ, ಸನೀಹದ ಕಣ್ಣಂಬಾಡಿ ಅಮ್ಮನ ಪೂಜೆ ನೆರವೇರಿತು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಬಳಿಕ ವಸೂರಿ ಮಾಲ ತೋಟಂ ತೆರೆ ನಡೆಯಿತು.
ಬುಧವಾರ ಗುಳಿಗನ್ ತೆರೆಯಿಂದ ದ್ವೀತಿಯ ದಿನದ ಉತ್ಸವ ಆರಂಭವಾಯಿತು. ಶ್ರೀ ಮುತ್ತಪ್ಪನ್ ಮತ್ತು ತಿರುವಪ್ಪನ್ ತೆರೆ ನಡೆಯಿತು, ಉತ್ಸವದ ಕೊನೆಯಲ್ಲಿ ವಸೂರಿಮಾಲ ತೆರೆ ಕಂಡು ಭಕ್ತರಿಗೆ ಅನ್ನಸಂತರ್ಪಣೆ ನಡೆದು ಉತ್ಸವ ಕೊನೆಗೊಂಡಿತು. ಉತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪನ್ ದೇವಾಲಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಹಾಜರಿದ್ದರು.

ಚಿತ್ರ ಅಳವಡಿಸಲಾಗಿದೆ
11 ಠಿ 3., 3.2, - ವಿರಾಜಪೇಟೆ ಬಿಟ್ಟಂಗಾಲ ಗ್ರಾಮದ ಕಂಪನಿಮೊಟ್ಟೆಯ ಪ್ರಾರ್ಥನ ಮಡಪುರ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕ ತೆರೆ ಮಹೋತ್ಸವದ ವಸೂರಿಮಾಲ ತೋಟಂ ತೆರೆ , ಮುತ್ತಪ್ಪನ್ ವೆಳ್ಳಾಟಂ ತೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net