ಶ್ರೀ ಮುತ್ತಪ್ಪ ದೇವರ ತೆರೆ ಮಹೋತ್ಸವ

19 vpt 4.1
ದೈವ ನರ್ತನದ ಭಂಗಿ ಮತ್ತು ಭಕ್ತರಿಗೆ ಅನುಗ್ರಹ ನೀಡುತ್ತಿರುವ ದೈವ
Published on

ವಿರಾಜಪೇಟೆ: ಮಲೆತಿರುಕೆ ಬೆಟ್ಟ ಸುಂಕದ ಕಟ್ಟೆಯ ಶ್ರೀ ಮುತ್ತಪ್ಪ ದೇವಾಲಯದ ಮೂರನೇ ವರ್ಷದ ಶ್ರೀ ಮುತ್ತಪ್ಪ ದೇವರ ವಾರ್ಷಿಕ ತೆರೆ ಮಹೋತ್ಸವ ಇತ್ತೀಚೆಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ಗಣಪತಿ ಹೋಮ, ತೇಲುಗರ ಬೀದಿಯ ಶ್ರೀ ಮಾರಿಯಮ್ಮ ದೇವಾಲಯದಿಂದ ಮಲೆ ತಿರುಕೆ ಬೆಟ್ಟದ ಮುತ್ತಪ್ಪ ದೇವಾಲಯದವರೆಗೆ ಕಳಸ ಮೆರವಣಿಗೆ ನಡೆಸಲಾಯಿತು. ಬಳಿಕ ಮುತ್ತಪ್ಪ ಬಸುರಿಮಾಲ ಪೊಟ್ಟ ದೇವರ ತೆರೆ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net