

ತಿ.ನರಸೀಪುರ: ಹಳೇ ಸಂತೆಮಾಳದ ಶ್ರೀ ಶಿವಕಾಮ ಸುಂದರಿ ಅಮ್ಮನವರ ಸಮೇತ ಅನಾದಿ ಶ್ರೀ ಮೂಲಸ್ಥಾನೇಶ್ವರಸ್ವಾಮಿ ರಥೋತ್ಸವ ಪ್ರಯುಕ್ತ ಶಯನೋತ್ಸವ ಜರುಗಿತು.
ದೇವಾಲಯದಲ್ಲಿ ರುದ್ರಾಭಿಷೇಕ ಸೇರಿದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ರಥೋತ್ಸವ ಮುಗಿದ ಬಳಿಕ ಭಾನುವಾರ ರಾತ್ರಿ ಉತ್ಸವಮೂರ್ತಿಗೆ ಆಭರಣ ಹಾಗೂ ವಿವಿಧ ಪುಷ್ಪಗಳಿಂದ ಅಲಂಕರಿಸಲಾಯಿತು.
ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಆಗಮಿಕ ನೀಲಕಂಠ ದೀಕ್ಷಿತ್ ಹಾಗೂ ಶ್ರೀ ಅನಾದಿ ಮೂಲಸ್ಥಾನೇಶ್ವರಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಟಿ.ಎಸ್.ರಾಘವೇಂದ್ರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಅರ್ಚಕರಾದ ಆರ್.ಅರ್ಜುನ್, ಬಿ.ಶೇಷನ್, ಉದ್ಯಮಿ ಎನ್.ರೇಣುಕಾಪ್ರಸಾದ್(ಮಧು), ಎನ್.ಶ್ರೀಕಂಠಪ್ರಸಾದ್(ಚಂದು) ಇತರರು ಇದ್ದರು.