

ವಿಜಯಪುರ: ತಾಲೂಕಿನ ನಾಗಠಾಣ ಗ್ರಾಮದಲ್ಲಿ ಪೌರಾಣಿಕ ಹಾಗೂ ಇತಿಹಾಸ ಪ್ರಸಿದ್ಧ ಗ್ರಾಮ ದೇವತೆಯರಾದ ಶ್ರೀ ಲಕ್ಷ್ಮೀ ಮತ್ತು ದ್ಯಾಮವ್ವದೇವಿ ಜಾತ್ರಾ ಮಹೋತ್ಸವವು ಗುರುವಾರ ಅತ್ಯಂತ ವೈಭವದಿಂದ ನಡೆಯಿತು.
ನಾಗಠಾಣ ಮತೇತ್ರದ ಶಾಸಕ ವಿಠಲ ಕಟಕದೊಂಡ ಬೆಳಗ್ಗೆ ಮೆರವಣಿಗೆಗೆ ಚಾಲನೆ ನೀಡಿದರು. ಸಾರವಾಡದ ಬಸವೇಶ್ವರ ಗೊಂಬೆ ಕುಣಿತ, ಅಜನಾಳದ ಕರಡಿ ಮಜಲು, ನಾಗಠಾಣ, ಗೂಗದಡ್ಡಿಯ ಡೊಳ್ಳು ಕುಣಿತ, ಅಥಣಿಯ ವಾದ್ಯಮೇಳ, ಕಲಬುರ್ಗಿಯ ಪೋತರಾಜನ ಕುಣಿತ ವಿವಿಧ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ ಅಪಾರ ಭಕ್ತ ಸಮೂಹದೊಂದಿಗೆ ಜರುಗಿತು.
ಮೆರವಣಿಗೆಯುದ್ದಕ್ಕೂ ಹೆಣ್ಣು ಮಕ್ಕಳು ದೇವಿಯರಿಗೆ ಉಡಿ ತುಂಬಿ, ಹಣ್ಣು&ಕಾಯಿ ನೈವೇದ್ಯ, ಹರಕೆ ಕಾಣಿಕೆ ಸಮರ್ಪಿಸಿ ಕೃತಾರ್ಥರಾದರು. ಅಲ್ಲದೆ, 500 ಕ್ಕೂ ಅಧಿಕ ಮಹಿಳೆಯರಿಂದ ನಡೆದ ಕುಂಭ ಮೇಳವು ಜಾತ್ರೆಯ ವಿಶೇಷವಾಗಿತ್ತು.
ಮುಖಂಡರಾದ ಚಂದ್ರಶೇಖರ ಅರಕೇರಿ, ಪ್ರಕಾಶ ಲೋಣಿ, ಜಾತ್ರಾ ಸಮಿತಿ ಅಧ್ಯ ಕಲ್ಯಾಣಿ ಪತ್ತಾರ, ಉಪಾಧ್ಯ ಸಿದ್ದಪ್ಪ ಶಿರಕನಹಳ್ಳಿ, ಅಶೋಕ ಕತ್ನಳ್ಳಿ, ಬಾಬು ಕತ್ನಳ್ಳಿ, ಬಸವರಾಜ ಹಳ್ಳಿ, ಪ್ರಭು ಹಂಡಿ, ಶ್ರೀಧರ ಬಡಿಗೇರ, ಸಿದ್ದು ಬಡಿಗೇರ, ಸುಭಾಷ ಪತ್ತಾರ, ಮೋನಪ್ಪ ಬಡಿಗೇರ, ಮಲಕಣ್ಣ ಹುಣಶ್ಯಾಳ, ಬಸವರಾಜ ಬಂಡೆ, ಪ್ರಕಾಶ ಹಡಪದ, ಕಾಶೀನಾಥ ಬಡಿಗೇರ, ಶರಣು ಬಗಲಿ, ಸಿದ್ಧಗೊಂಡ ರೋಳ್ಳಿ, ರೇವಣಸಿದ್ದ ಸಾರವಾಡ, ಸುರೇಶ ಹೊರ್ತಿ, ಭಗವಂತ ಬಡಿಗೇರ, ರೇವಪ್ಪ ಹಚಡದ, ಗ್ರಾಮಸ್ಥರು ಮತ್ತಿತರರಿದ್ದರು.