

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಲಕ್ಷದೀಪೋತ್ಸವ ಸಂಭ್ರಮಕ್ಕೆ ಶನಿವಾರ ವೈಭವದ ತೆರೆ ಬಿದ್ದಿದೆ.
ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಕಾರ್ತಿಕ ಮಾಸದ ದೀಪೋತ್ಸವ ವೈಭವ ಮಂಜುನಾಥ ಸ್ವಾಮಿ ರಥಾರೂಢನಾಗುವ ಮೂಲಕ ಲಕ್ಷಾಂತರ ಭಕ್ತರು ಕಣ್ತುಂಬಿದರು. ಕೊನೆಯ ದಿನವಾದ ಶನಿವಾರ ರಾತ್ರಿ ನಾಡಿನ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದು, ಇಡೀ ರಾತ್ರಿ ದೀಪೋತ್ಸವ ದ ವೈಭವದಲ್ಲಿ ಭಾಗಿಯಾಗಿದ್ದಾರೆ.
ಇಡೀ ರಾತ್ರಿ ಕಲಾವಿದರಿಂದ ಕಲಾಸೇವೆ
ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಲಕ್ಷದೀಪೋತ್ಸವ ವೈಭವದಲ್ಲಿ ಶನಿವಾರ ರಾತ್ರಿ ಕಲಾವಿದರಿಂದ ಕಲಾಸೇವೆ ನಡೆಯಿತು. ಕೋಟಿ ಕೋಟಿ ದೀಪಗಳಿಂದ ಕುಡುಮಕ್ಷೇತ್ರ ಬೆಳಗಿದೆ. ಐದು ದಿನಗಳ ಕಾಲ ನಡೆದ ಲಕ್ಷದೀಪೋತ್ಸವ ಹಿನ್ನೆಲೆಯಲ್ಲಿ ಮಂಜುನಾಥ ಸ್ವಾಮಿಗೆ ಗೌರಿಮಾರುಕಟ್ಟೆ ಉತ್ಸವ ಮತ್ತು ಬೆಳ್ಳಿರಥೋತ್ಸವ ನಡೆಯಿತು. ಕಾರ್ತಿಕ ಮಾಸದ ಲಕ್ಷದೀಪೋತ್ಸವದ ಸಂಭ್ರಮದ ಕ್ಷಣದಲ್ಲಿ ನಾಡಿನಾದ್ಯಂತ ಲಕ್ಷಾಂತರ ಜನರು ಭಾಗಿಯಾಗಿದ್ದಾರೆ..ರಾತ್ರಿ ಇಡೀ ಕೊಂಬು ಕಹಳೆ ಜಾಗಟೆ ಶಂಖಸಣ್ಣಾಟವನ್ನು ನಿರಂತರ ವಾಗಿ ಕಲಾವಿದರು ಪ್ರದರ್ಶಿಸಿದ್ದಾರೆ..ಲಕ್ಷದೀಪೋತ್ಸವದ ಹಿನ್ನಲೆ ಕೋಟಿ ಕೋಟಿ ವಿದ್ಯುತ್ ದೀಪಗಳಿಂದ ಕ್ಷೇತ್ರವನ್ನು ಸಿಂಗಾರ ಗೊಳಿಸಲಾಗಿದೆ. ಬೆಂಗಳೂರು ಮೂಲದ ಭಕ್ತರ ತಂಡ ಇಡೀ ದೇವಸ್ಥಾನವನ್ನು ಹೂವು,ಹಣ್ಣು ಸೇರಿದಂತೆ ಪ್ರಾಕೃತಿಕ ವಾಗಿ ಸಿಗುವ ವಸ್ತುಗಳಿಂದ ಅಲಂಕೃತ ಮಾಡಿದ್ದಾರೆ.
ಕೋಟಿ ಕೋಟಿ ದೀಪಗಳಿಂದ ಬೆಳಗಿದ ಧರ್ಮಸ್ಥಳ
ಧರ್ಮಸ್ಥಳ ದ ವಿವಿಧ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ, ರಾಜ್ಯ ಮಟ್ಟದ ವಸ್ತು ಪ್ರದರ್ಶನ ವೂ ನಡೆದಿದೆ. ಒಟ್ಟಿನ್ನಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಲಕ್ಷದೀಪೋತ್ಸವದ ವೈಭವಕ್ಕೆ ಸಂಭ್ರಮದ ತೆರೆ ಕಂಡಿದೆ. ಕೋಟಿ ಕೋಟಿ ದೀಪಗಳಿಂದ ಬೆಳಗಿದ ಧರ್ಮಸ್ಥಳವನ್ನು ಭಕ್ತರ ಕಣ್ಣುತುಂಬಿದರು.
ಸಾಹಿತ್ಯ ಸಮ್ಮೇಳನ ಸಂಪನ್ನ
ಕೊನೆಯ ದಿನದ ಅಂಗವಾಗಿ ಕ್ಷೇತ್ರ ದ ಅಮೃತವರ್ಷಿಣಿ ಸಭಾಭವನದಲ್ಲಿ ೯೨ ನೇ ಸಾಹಿತ್ಯ ಸಮ್ಮೇಳನ ನಡೆಯಿತು. .ಸಾಹಿತ್ಯ ಸಮ್ಮೇಳನವನ್ನು ಖ್ಯಾತ ವಿದ್ವಾಂಸ ಶತಾವಧನಿ ಆರ್.ಗಣೇಶ್ ಉದ್ಘಾಟನೆ ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನ ದಲ್ಲಿ ಡಾ.ಪ್ರಮೀಳಾ ಮಾಧವ, ಡಾ.ಬಿ.ವಿ ವಸಂತ ಕುಮಾರ್, ಫ್ರೊ.ಮೊರಬದ ಮಲ್ಲಿಕಾರ್ಜುನ ಗೋಷ್ಠಿ ನಡೆಸಿಕೊಟ್ಟಿದ್ದಾರೆ..ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಂಶೋಧಕ ಪಾದೆಕಲ್ಲು ವಿಷ್ಣುಭಟ್ಟ ಅಧ್ಯಕ್ಷತೆಯನ್ನು ವಹಿಸಿದ್ದಾರೆ.