ಶ್ರೀ ಕೃಷ್ಣ ಜಯಂತಿ: ಅಗತ್ಯ ಸಿದ್ಧತೆಗೆ ಸಲಹೆ

shree krishna jayanti meeting koppal adc siddarameshwar
Published on

ಕೊಪ್ಪಳ: ಶ್ರೀ ಕೃಷ್ಣ ಜಯಂತಿ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ಜಯಂತಿ ಆಚರಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆ.8ರಂದು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾಡಳಿತದಿಂದ ಶ್ರೀ ಕೃಫ್ಣಿ ಜಯಂತಿಯ ಆಚರಣೆ ಕಾರ್ಯಕ್ರಮವನ್ನು ಕಳೆದ ವರ್ಫಿದಂತೆ ಈ ಬಾರಿಯು ಆಗಸ್ಟ್​ 26ರ ಬೆಳಿಗ್ಗೆ 10ಗಂಟೆಗೆ ಕೊಪ್ಪಳದ ಶಿರಸಪ್ಪಯ್ಯನ ಮಠ ಬಳಿ ಇರುವ ಶ್ರೀ ಕೃಫ್ಣಿ ದೇವಸ್ಥಾನದ ಆವರಣದಲ್ಲಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವೇದಿಕೆ ಅಲಂಕಾರ, ವಿಶೇಫಿ ಉಪನ್ಯಾಸ ಆಯೋಜನೆ, ಕುಡಿಯುವ ನೀರಿನ ವ್ಯವಸ್ಥೆ, ಜಯಂತಿ ಅಂಗವಾಗಿ ನಡೆಯುವ ಮೆರವಣಿಗೆ ಸಂದರ್ಭದಲ್ಲಿ ರಸ್ತೆ ಸ್ವಚ್ಛತೆ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಅಗತ್ಯ ಏರ್ಪಾಡು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಎ.ಬಸವರಾಜ, ಸಮಾಜದ ಮುಖಂಡರಾದ ನಾರಾಯಣಗೌಡ ಪಾಟೀಲ, ಜಗನ್ನಾಥ ಯಾದವ, ಭೀಮಣ್ಣ ಲೇಬಗೇರಿ, ಯಂಕಪ್ಪ ವಾಲಿಕಾರ, ವೆಂಕಟೇಶ, ರಾಮ ಬಾಗಲಿ, ಪರುಶುರಾಮ ಸೇರಿದಂತೆ ಇನ್ನೂ ಪ್ರಮುಖರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net