

ಬಂಟ್ವಾಳ: ಅವಿಭಜಿತ ದ.ಕ.ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಬೇರೆ ಯಾವ ಜಿಲ್ಲೆಯಲ್ಲಿಯೂ ನಡೆಯಲು ಸಾಧ್ಯವಿಲ್ಲ. ಇಲ್ಲಿನ ನೆಲದ ಸಂಸ್ಕೃತಿಯೇ ವಿಶಿಷ್ಟವಾದುದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಗುರುವಾರ ಕುಮ್ಡೇಲು ಶ್ರೀ ನಾಗಬ್ರಹ್ಮ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ಕೋರ್ದಬ್ಬು ಶಿಲಾಮಯ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಕಟ್ಟಡ ನಿರ್ಮಾಣ ಗುತ್ತಿಗೆದಾರರಾದ ಡಾ.ಸಂಜೀವ ದಂಡಕೇರಿ, ನೆತ್ತರಕೆರೆಗುತ್ತು ನಾರಾಯಣ ಹೊಳ್ಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಬಾಲಕೃಷ್ಣ, ಪ್ರಮುಖರಾದ ಶಿವಪ್ಪ ನಂತೂರು, ಉದ್ಯಮಿಗಳಾದ ರಾಜಶೇಖರ ಚೌಟ, ಕೆಪಿ ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ, ತುಂಬೆಗುತ್ತು ಚಂದ್ರಪ್ರಕಾಶ್ ಶೆಟ್ಟಿ, ನಿರ್ಮಾಣ ಸಮಿತಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಬೆಂಜನಪದವು, ಆಡಳಿತ ಮೊಕ್ತೇಸರರಾದ ಭಾಸ್ಕರ ಚೌಟ, ಭರತ್ ಕುಮ್ಡೇಲು, ಮನೋಜ್ ಆಚಾರ್ಯ ನಾಣ್ಯ, ರವೀಂದ್ರ ಕಂಬಳಿ, ದಾಮೋದರ ನೆತ್ರಕೆರೆ, ಜಗನ್ನಾಥ ಚೌಟ, ಉಮೇಶ್ ಶೆಟ್ಟಿ ಬರ್ಕೆ, ಗಣೇಶ್ ಸುವರ್ಣ ಉಪಸ್ಥಿತರಿದ್ದರು.
ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ರಾಜೇಶ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು. ಹರಿಕೃಷ್ಣ ಕೆ.ಪಂಡಿತ್ ವಂದಿಸಿದರು.