ಶ್ರೀ ಗುರು ಕೊಟ್ಟೂರೇಶ್ವರ ದೇಗುಲಕ್ಕೆ ಪುಷ್ಪಾಲಂಕಾರ

Kottureshwara
ಕೊಟ್ಟೂರಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೂಗಳಿಂದ ವಿಶೇಷ ಅಲಂಕಾರ ಮಾಡಿರುವುದು.
Published on

ಕೊಟ್ಟೂರು: ಪಟ್ಟಣದಲ್ಲಿ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಆಚರಿಸಲಾಯಿತು. ತರಹೇವಾರಿ ಹೂವುಗಳಿಂದ ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಿರುವುದು ಭಕ್ತರ ಕಣ್ಮನ ಸೆಳೆಯಿತು.

ಪಟ್ಟಣದ ವರ್ತಕ ಕೋಗಳಿ ಕೊಟ್ರೇಶ ಅವರು ಮೊದಲ ಸಲ ಹೂವಿನ ಅಲಂಕಾರ ಮಾಡಿಸಿದ್ದಾರೆ. ಬೆಂಗಳೂರಿನಿಂದ 35 ವಿವಿಧ ಜಾತಿಯ ಹೂಗಳನ್ನು ತರಿಸಿದ್ದು, ದೇವಾಲಯದ ಮುಂದಿನಿಂದ ಗರ್ಭಗುಡಿ ಸುತ್ತ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ದಾವಣಗೆರೆಯಿಂದ ಆಗಮಿಸಿದ್ದ 15 ಜನರು ಭಾನುವಾರ ರಾತ್ರಿ ಆರಂಭಿಸಿ ಸೋಮವಾರ ಬೆಳಗಿನ ಜಾವದೊಳಗೆ ಅಲಂಕಾರ ಕಾರ್ಯ ಮುಗಿಸಿದ್ದಾರೆ.

ಈ ಕುರಿತು ವರ್ತಕ ಕೋಗಳಿ ಕೊಟ್ರೇಶ ಮಾತನಾಡಿ, ಇದೇ ಪ್ರಥಮ ಬಾರಿಗೆ ದೇವಾಲಯಕ್ಕೆ 1.50 ಲಕ್ಷ ರೂ. ವೆಚ್ಚದಲ್ಲಿ ಹೂವಿನ ಅಲಂಕಾರ ಮಾಡಿಸಿದ್ದೇನೆ. ಕೊಟ್ಟೂರೇಶ್ವರ ಸ್ವಾಮಿಯ ಅನುಗ್ರಹಕ್ಕಾಗಿ ಈ ಸೇವೆ ಅಷ್ಟೆ. ಮುಂದಿನ ವರ್ಷವೂ ಹೂವಿನ ಅಲಂಕಾರ ಮಾಡುವ ಸಂಕಲ್ಪ ಮಾಡಿದ್ದೇನೆ ಎಂದರು.

ಕೊಟ್ಟೂರೇಶ್ವರಗೆ ಹೂಗಳಿಂದ ವಿಶೇಷವಾಗಿ ಸಿಂಗರಿಸಿ ಪೂಜಿಸಲಾಯಿತು. ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net