ಕೆಂಪೇಗೌಡ ಎಲ್ಲರಿಗೂ ಪ್ರೇರಕ ಶಕ್ತಿ

web 1
Published on

ಕಡೂರು: ಕೆಂಪೇಗೌಡರ ಆದರ್ಶಗಳು ಎಲ್ಲ ವರ್ಗದವರಿಗೂ ಮಾದರಿಯಾಗಬೇಕಿದೆ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥಸ್ವಾಮೀಜಿ ತಿಳಿಸಿದರು.

ಶುಕ್ರವಾರ ಪಟ್ಟಣದ ಕೆ.ಎಂ.ರಸ್ತೆ-ದೊಡ್ಡಪಟ್ಟಣಗೆರೆ ರಸ್ತೆ ಕೆಂಪೇಗೌಡ ಮಹಾದ್ವಾರ ಉದ್ಘಾಟಿಸಿ ಸಮಾರಂಭದಲ್ಲಿ ಮಾತನಾಡಿದರು.

500 ವರ್ಷಗಳ ಹಿಂದೆ ನಾಡಪ್ರಭು ಕೆಂಪೇಗೌಡರು ಎಲ್ಲ ವರ್ಗದವರಿಗೂ ಪ್ರಾಮುಖ್ಯತೆ ನೀಡಿ ಬೆಂಗಳೂರನ್ನು ಅಭಿವೃದ್ಧಿ ಪಡಿಸಿದರು. ಇವರು ಒಂದು ವರ್ಗಕ್ಕೆ ಸೀಮಿತವಲ್ಲ. ಎಲ್ಲ ವರ್ಗದವರಿಗೂ ಪ್ರೇರಕ ಶಕ್ತಿ ಎಂದರು.

ಒಂದು ಸಮಾಜ ಕಟ್ಟಲು ಎಲ್ಲ ವರ್ಗದವರ ಸಹಕಾರ ಬೇಕಿದೆ. ಕಡೂರು ಪಟ್ಟಣ ಜಾತ್ಯತೀತವಾಗಿ ಎಲ್ಲ ವರ್ಗದವರಿಗೆ ಅನ್ನ ಕೊಡುವ ಭೂಮಿಯಾಗಿದೆ. ಶಾಸಕ ಬೆಳ್ಳಿಪ್ರಕಾಶ್ ಅವರ ದೂರದೃಷ್ಟಿ ಫಲವಾಗಿ ಜಿಲ್ಲೆಯಲ್ಲಿ ಕೆಂಪೇಗೌಡರ ಹೆಸರಿನಲ್ಲಿ ದ್ವಾರ ನಿರ್ವಣವಾಗಿರುವುದು ಕಡೂರಿನಲ್ಲಿ ಮಾತ್ರ. ಪಟ್ಟಣದ ಒಕ್ಕಲಿಗ ಸಮಾಜ ಬಹುಸಂಖ್ಯಾತರ ಸಹಕಾರದಿಂದ ಬಲಗೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net