

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನಗರದ ಶ್ರೀ ಗಜಾನನ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ 2024-25ನೇ ಸಾಲಿನಲ್ಲಿ 4.13 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ. 15ರಷ್ಟು ಡಿವಿಡೆಂಡ್ ನೀಡುವುದಾಗಿ ಘೊಷಿಸಿದೆ.
ಇತ್ತೀಚೆಗೆ ಕರೆದ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಹಿತೇಶಕುಮಾರ ಮೋದಿ ಈ ವಿಷಯವನ್ನು ಪ್ರಕಟಿಸಿದರು.
1998ರಲ್ಲಿ 39.21 ಲಕ್ಷ ರೂ. ದುಡಿಯುವ ಬಂಡವಾಳದೊಂದಿಗೆ ಪ್ರಾರಂಭವಾದ ಸಂಘವು ಇಂದು 228.24 ಕೋಟಿ ರೂ. ಗಳಷ್ಟು ದುಡಿಯುವ ಬಂಡವಾಳವನ್ನು ಹೊಂದಿದೆ. ಈ ಸಾಧನೆಗೆ ಸದಸ್ಯರ ಮತ್ತು ಗ್ರಾಹಕರ ಸಹಕಾರ ಮತ್ತು ವಿಶ್ವಾಸವೇ ಕಾರಣ ಎಂದರು.
ಮಾರ್ಚ-2025ಕ್ಕೆ ಶೇರು ಬಂಡವಾಳ 10.75 ಕೋಟಿ ರೂ.ಗಳಷ್ಟಿದ್ದು, ಠೇವಣಿಗಳು 191.46 ಕೋಟಿ ರೂ. ಗಳಷ್ಟಿದೆ. ಒಟ್ಟು 156.06 ಕೋಟಿ ರೂ. ಸಾಲ ವಿತರಣೆ ಮಾಡಿದ್ದೇವೆ ಎಂದು ವಿವರಿಸಿದರು. ನಿರ್ದೇಶಕ ಚನ್ನಬಸಪ್ಪ ಮಂಕಣಿ 2025-26ನೇ ಸಾಲಿಗೆ ಅಂದಾಜಿಸಲಾದ ಬಜೆಟ್ ಮಂಡಿಸಿದರು. ನಿರ್ದೇಶಕರಾದ ಅರುಣ ಅಣ್ಣಿಗೇರಿ, ರಾಜೇಂದ್ರ ಎಚ್., ವಿಜಯ ಮೆಹರವಾಡೆ ಮಾತನಾಡಿದರು. ಮುಖ್ಯ ಕಾರ್ಯ ನಿರ್ವಾಹಕ ಅನಿಲ ದೇಸಾಯಿ ವರದಿ ಮಂಡಿಸಿದರು. ಸದಸ್ಯರಾದ ಹರೀಶ ಮಹಾಜನ, ಸಂಜೀವ ಬೆಣಗಿ, ಸಂಗಪ್ಪ ಸವದತ್ತಿ, ಪ್ರಭಾವತಿ ಇಂಗಳಹಳ್ಳಿ ಉಪಸ್ಥಿತರಿದ್ದರು. ನಿರ್ದೇಶಕ ಬಸವಣ್ಣೆಯ್ಯ ಹಿರೇಮಠ ವಂದಿಸಿದರು.