ನವೋದಯ ಟ್ರಸ್ಟ್ ವಿಮೆ ಚೆಕ್ ವಿತರಣೆ ನವೋದಯ ಟ್ರಸ್ಟ್ : ವಿಮೆ ಚೆಕ್ ವಿತರಣೆ

mng- aug 7- Cheerumbha credit
Published on

ಮಂಗಳೂರು * ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್( ರಿ) , ಪ್ರಾಯೋಜಿತ ನವೋದಯ ಸ್ವಸಹಾಯ ಸಂಘದ ಸದಸ್ಯ ಈಚೆಗೆ ಆಕಸ್ಮಿಕ ಮರಣ ಹೊಂದಿದ್ದು, ಈ ಕುಟುಂಬದ ವಾರಿಸುದಾರರಿಗೆ ವಿಮೆ ಚೆಕ್ ನ್ನು ಸೋಮವಾರ ಸಂಸ್ಥೆಯ ಮೇನೆಜಿಂಗ್ ಟ್ರಸ್ಟಿ ಹಾಗೂ ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ವಿತರಣೆ ಮಾಡಿದರು.

ಬಂಟ್ವಾಳ ತಾಲೂಕಿನ ಪೊಳಲಿಯಲ್ಲಿರುವ ಇಂಚರ ನವೋದಯ ಸ್ವಸಹಾಯ ಸಂಘದ ಸದಸ್ಯ ಸಂತೋಷ್ ಕುಮಾರ್ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿರುತ್ತಾರೆ. ಮೃತ ಸಂತೋಷ್ ಕುಮಾರ್ ಅವರ ತಾಯಿ ಶ್ರೀಮತಿ ಜಯಂತಿ ಅವರಿಗೆ ವಿಮಾ ಯೋಜನೆಯ ಒಂದು ಲಕ್ಷದ ಚೆಕ್ ನ್ನು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಎಸ್ ಸಿಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ , ಟ್ರಸ್ಟಿ ಸುನಿಲ್ ಕುಮಾರ್ ಬಜಗೋಳಿ, ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net