

ಮಂಗಳೂರು: ಶ್ರೀ ವೆಂಕಟರಮಣ ದೇವಸ್ಥಾನ, ಆಚಾರ್ಯ ಮಠ ಶಾರದಾ ಶತಮಾನೋತ್ಸವದ ಪ್ರಯುಕ್ತ ಸಹಸ್ರ ಚಂಡಿಕಾಯಾಗ ಬುಧವಾರ ಆರಂಭಗೊಂಡಿದೆ.
ದೇವಳದ ರಾಜಾಂಗಣದಲ್ಲಿ ಪಂಡಿತ್ ನರಸಿಂಹ ಆಚಾರ್ಯ, ಪಂಡಿತ್ ಕಾಶಿನಾಥ್ ಆಚಾರ್ಯ, ವೇದಮೂರ್ತಿ ಭಾಸ್ಕರ್ ಭಟ್ ಹಾಗೂ ವೈದಿಕರ ತಂಡ ಉಪಸ್ಥಿತಿಯಲ್ಲಿ ಯಾಗ ಆರಂಭಗೊಂಡಿದೆ. ಶಾರದಾ ಮಹೋತ್ಸವ ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ ದಂಪತಿ ಯಾಗದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಚಂಡಿಕಾಯಾಗದ ಪೂರ್ಣಾಹುತಿ ಅಕ್ಟೋಬರ್ 2 ರಂದು ಕಾಶಿ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ರ ಉಪಸ್ಥಿತಿಯಲ್ಲಿ ನೆರವೇರಲಿದೆ.