ಶ್ರಾವಣಮಾಸ ಅತ್ಯಂತ ಶ್ರೇಷ್ಠವಾದದು

SWAMY
ಕೊಟ್ಟೂರಿನಲ್ಲಿ ಆಯೋಜಿಸಿದ್ದ ಸುಮಂಗಲೆಯರಿಗೆ ಉಡಿ ತುಂಬುವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಕಣ್ವಕುಪ್ಪೆ ಗವಿಮಠಾಧ್ಯಕ್ಷ ಡಾ. ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ಲೋಕಸಭೆ ಸದಸ್ಯ ದೇವೇಂದ್ರಪ್ಪ, ಹರಪನಹಳ್ಳಿ ಕ್ಷೇತ್ರದ ಶಾಸಕಿ ಲತಾ ಮಲ್ಲಿಕಾರ್ಜುನ ಇದ್ದರು.
Published on

ಕೊಟ್ಟೂರು: ಶರಣರು, ದಾರ್ಶನಿಕರು ಬಿತ್ತಿದ ಜ್ಞಾನದಿಂದ ಇಡೀ ವಿಶ್ವದಲ್ಲಿ ಭಾರತ ವಿಶ್ವಗುರುವಾಗಿ ಗುರುತಿಸಿಕೊಂಡಿದೆ ಎಂದು ಕಣ್ವಕುಪ್ಪೆ ಗವಿಮಠಾಧ್ಯಕ್ಷ ಡಾ. ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಸುಮಂಗಲೆಯರಿಗೆ ಉಡಿ

ಪಟ್ಟಣದಲ್ಲಿ ಶ್ರೀಗುರು ಶಾಂತೇಶ್ವರ ಪ್ರತಿಷ್ಠಾನ ಹಾಗೂ ಲೋಕ ಕಲ್ಯಾಣಾರ್ಥವಾಗಿ ವರದಶಂಕರ ಪೂಜೆ, ಸುಮಂಗಲೆಯರಿಗೆ ಉಡಿ ತುಂಬುವ ಹಾಗೂ ಗುರುವಂದನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ದೇಶದ ಪ್ರಾಚೀನ ಪರಂಪರೆ, ಸರ್ವರಿಗೂ ಭಾತೃತ್ವ ಮೂಡಿಸುವ ಸಂಸ್ಕಾರ, ಅನೂಚಾನವಾಗಿ ನಡೆದು ಬಂದಿರುವ ಸಂಪ್ರದಾಯಗಳು ಅನುಕರಣೀಯವಾಗಿವೆ. ಹಲವು ಮಾಸಗಳಲ್ಲಿ ಶ್ರಾವಣಮಾಸ ಅತ್ಯಂತ ಶ್ರೇಷ್ಠವಾದದು. ಈ ಮಾಸಪೂರ್ತಿ ನಿಮ್ಮ ಶ್ರವಣಕ್ಕೆ ಉತ್ತಮ ಸಂದೇಶ, ಗುರುಬೋಧನೆ, ಸಂಸ್ಕಾರಯುತ ನಡೆಯಿಂದಾಗಿ ನಿಮ್ಮ ಬದುಕು ಪಾವನವಾಗುವುದರಲ್ಲಿ ಎರಡು ಮಾತಿಲ್ಲ.

ನೀವು ಹಣದಿಂದ ಅಧಿಕಾರದಿಂದ ಏನ್ನನ್ನಾದರೂ ತೀರಿಸಬಹುದು ಸಂಪಾದಿಸಬಹುದು ಆದರೆ ಪಂಚಋಣಗಳಾದ ಮಾತೃ, ಪಿತೃ, ಗುರು, ದೈವ, ದೇಶದ ಋಣ ತೀರಸಲು ಸಾಧ್ಯವಿಲ್ಲ. ಆದ್ದರಿಂದ ಈ ಋಣಗಳಿಗೆ ಬದ್ಧರಾಗಿದ್ದರೆ ಮಾತ್ರ ನಿಮ್ಮ ಬದುಕು ಸಾರ್ಥಕವಾಗಲಿದೆ ಎಂದರು.

ಲೋಕಸಭೆ ಸದಸ್ಯ ದೇವೇಂದ್ರಪ್ಪ ಮಾತನಾಡಿ, ಶ್ರಾವಣ ಮಾಸದಲ್ಲಿ ಗೃಹಿಣಿಯರಿಗೆ ಪೂಜ್ಯರಿಂದ ಉಡಿ ತುಂಬಿಸಿಕೊಂಡರೆ ಅವರ ಬದುಕು ಉಜ್ವಲವಾಗುತ್ತದೆ. ಇಂತಹ ಸಂಸ್ಕಾರಯುತ ಮತ್ತು ಪರಂಪರೆಯ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ ನಾಡಿನಲ್ಲಿ ಶಾಂತಿ ನೆಲೆಸುತ್ತದೆ ಎಂದರು.
ಹರಪನಹಳ್ಳಿ ಕ್ಷೇತ್ರದ ಶಾಸಕಿ ಲತಾ ಮಲ್ಲಿಕಾರ್ಜುನ ಉಡಿ ತುಂಬಿಸಿಕೊಂಡ ಮಹಿಳೆಯರಿಗೆ ಶುಭಕೋರಿದರು. ಕೊಟ್ಟೂರು ಕಟ್ಟೆಮನಿ ಹೀರೆಮಠದ ಯೋಗಿರಾಜೇಂದ್ರ ಸ್ವಾಮೀಜಿ, ಮಹಲ್ ಮಠದ ಶಿವಪ್ರಕಾಶ ದೇವರು, ಕೊಟ್ಟೂರು ಡೋಣೂರು ಚಾನುಕೋಟಿ ಮಠದ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಇದ್ದರು.


ನೂರಾರು ಸುಮಂಗಲೆಯರಿಗೆ ಡಾ. ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಉಡಿ ತುಂಬಿ ಆಶೀರ್ವಚನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net